ತಾನೇ ಮೂತ್ರ ವಿಸರ್ಜನೆ ಮಾಡಿ ನನ್ನನ್ನು ಆರೋಪಿಸುತ್ತಿದ್ದಾಳೆ : ಶಂಕರ್‌ ಮಿಶ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಏರ್ ಇಂಡಿಯಾ ವಿಮಾನದಲ್ಲಿ ಸಹ-ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ ಶಂಕರ್ ಮಿಶ್ರಾ, ನಾನು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ ಆ ಮಹಿಳೆಯೇ ತನ್ನ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ, ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೆಹಲಿ ನ್ಯಾಯಾಲದ ಮುಂದೆ ಹೇಳಿದ್ದಾನೆ.

ವಿಮಾನದಲ್ಲಿ ಮಹಿಳೆಯ ಆಸನವನ್ನು ನಿರ್ಬಂಧಿಸಲಾಗಿತ್ತು ಮತ್ತು ಮಿಶ್ರಾ ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ. ಅದಲ್ಲದೆ ಮಹಿಳೆ ತಾನೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ, ಆಕೆ ಕಥಕ್ ನೃತ್ಯಗಾರ್ತಿ, 80%ರಷ್ಟು ಕಥಕ್ ನೃತ್ಯಗಾರರಿಗೆ ಈ ಸಮಸ್ಯೆ ಇದೆ, ”ಎಂದು ವಕೀಲರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!