ಶರದ್ ಪವಾರ್ ಬಣಕ್ಕೆ ಸಿಕ್ಕಿತು ಹೆಸರು, ಚಿಹ್ನೆ: ‘ಕಹಳೆ ಊದುವ ವ್ಯಕ್ತಿ’ಯ ಗುರುತು ಬಳಸಲು ‘ಸುಪ್ರೀಂ’ ಅನುಮತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊನೆಗೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯ ಗೊಂದಲಕ್ಕೆ ತೆರೆಬಿದ್ದಿದ್ದು, ಸುಪ್ರೀಂ ಕೋರ್ಟ್ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಶರದ್ ಪವಾರ್ ಬಣಕ್ಕೆ ಪಕ್ಷದ ಹೆಸರನ್ನು ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಬಳಸಲು ಅನುಮತಿ ನೀಡಿದೆ.

ಜೊತೆಗೆ ಶರದ್ ಪವಾರ್ ಬಣಕ್ಕೆ ಚುನಾವಣೆಗೆ ‘ಕಹಳೆ ಊದುವ ವ್ಯಕ್ತಿ’ಯ ಗುರುತನ್ನು ಚಿಹ್ನೆಯಾಗಿ ಬಳಸಲು ಅನುಮತಿ ನೀಡಿದೆ.

ಇದರ ಜೊತೆಗೆ ಈ ಚಿಹ್ನೆಯನ್ನು ಇತರರು ಬಳಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಅಂತೆಯೇ ಎನ್‌ಸಿಪಿ ಅಜಿತ್ ಪವಾರ್ ಬಣ ‘ಗಡಿಯಾರ’ ಚಿಹ್ನೆಯ ಕುರಿತು ಸಾರ್ವಜನಿಕ ನೋಟಿಸ್ ನೀಡುವಂತೆ ಕೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!