ಷೇರು ವಿವಾದ: ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್ ಕೊಟ್ಟ ಸುಪ್ರೀಂ ಕೋರ್ಟ್ ಸಮಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಹಿಂಡೆನ್‌ಬರ್ಗ್‌ ರಿಸರ್ಚ್‌ (Hindenburg) ಸಂಸ್ಥೆಯ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ್ದ ತಜ್ಞರ ಸಮಿತಿಯು ಅದಾನಿ ಗ್ರೂಪ್‌ಗೆ (Adani Group) ಕ್ಲೀನ್ ಚಿಟ್ ನೀಡಿದೆ.

ಅದಾನಿ ಸಮೂಹದಿಂದ ಷೇರು ಮಾರುಕಟ್ಟೆಯಲ್ಲಿ ಏರಿಳಿತವಾಗಿತ್ತು. ಚಿಲ್ಲರೆ ಹೂಡಿಕೆದಾರರನ್ನು ಸಾಂತ್ವನಗೊಳಿಸಲು ಸಂಸ್ಥೆಯು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಮೇಲ್ನೋಟಕ್ಕೆ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ತಜ್ಞರ ಸಮಿತಿ ಉಲ್ಲೇಖಿಸಿದೆ. ಈ ಮೂಲಕ ಕ್ಲೀನ್ ಚಿಟ್ ನೀಡಿದೆ.

ಅದಾನಿ ಸಮೂಹ ಕೈಗೊಂಡ ಕ್ರಮಗಳು ಷೇರು ಮಾರುಕಟ್ಟೆಯಲ್ಲಿ ವಿಶ್ವಾಸ ಬೆಳೆಸಲು ಸಹಾಯ ಮಾಡಿದೆ. ಷೇರುಗಳು ಈಗ ಸ್ಥಿರವಾಗಿವೆ ಎಂದು ಸಮಿತಿ ಹೇಳಿದೆ.ಕನಿಷ್ಠ ಸಾರ್ವಜನಿಕ ಷೇರುದಾರರಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯ ಕಂಡುಬಂದಿಲ್ಲ. ಅನುಸರಣೆಗಳ ಉಲ್ಲಂಘನೆಯಾಗಿಲ್ಲ ಎಂದು ಸಮಿತಿ ಹೇಳಿದೆ. ಅಲ್ಲದೇ ಅದಾನಿ ಸಮೂಹದ ಷೇರುಗಳಲ್ಲಿನ ವಿದೇಶಿ ಬಂಡವಾಳ ಹೂಡಿಕೆದಾರರು ಸೆಬಿಯ ನಿಯಮಗಳಿಗೆ ಬದ್ಧರಾಗಿದ್ದಾರೆ ಎಂದು ಸಮಿತಿ ಹೇಳಿದೆ.

ಅಮೆರಿಕದ ಹಿಂಡೆನ್‌ಬರ್ಗ್‌ ವರದಿಯಿಂದ ಹುಟ್ಟಿಕೊಂಡ ಅದಾನಿ ಸಮೂಹಗಳ ಷೇರು ವಿವಾದದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!