ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸೋಮವಾರದ ವಹಿವಾಟಿನಲ್ಲಿಯೂ ಭಾರಿ ಕುಸಿತ ದಾಖಲಿಸಿದ್ದು 52 ವಾರಗಳ ಕನಿಷ್ಟಮಟ್ಟವನ್ನು ತಲುಪಿವೆ. ಸೋಮವಾರ ಬಿಎಸ್ಇ ಮಧ್ಯಾಹ್ನ ವಹಿವಾಟಿನಲ್ಲಿ ಒಂದು ಶೇಕಡಾಗಿಂತಲೂ ಹೆಚ್ಚು ಕುಸಿದು ಪ್ರತಿ ಷೇರಿಗೆ 2,180 ರೂ. ಗೆ ತಲುಪಿದೆ. ಕಳೆದ ಕೆಲವು ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸ್ಟಾಕ್ ಕುಸಿಯುತ್ತಿದ್ದು ಕಳೆದ ಐದು ಮಾರುಕಟ್ಟೆ ಸೆಷನ್ಗಳಲ್ಲಿ 5 ಶೇಕಡಾಗಿಂತಲೂ ಹೆಚ್ಚು ಕುಸಿದಿದೆ.
ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ ದೈನಂದಿನ ವಹಿವಾಟಿನಲ್ಲಿ 2,350 ರೂ.ಗಳಿಗೆ ತಲುಪಿತ್ತು. ಪ್ರಸ್ತು ಬೇರಿಷ್ (ಇಳಿಕೆ) ಆಗಿದ್ದು 2,050 ರೂ.ಗಳ ವರೆಗೂ ಕುಸಿಯಬಹುದು ಮತ್ತು 2,250 ರೂ. ರೆಸಿಸ್ಟೆನ್ಸ್ ಲೆವೆಲ್ ಗೋಚರಿಸಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.