Wednesday, July 6, 2022

Latest Posts

ಶಾರ್ಕ್‌ ಟ್ಯಾಂಕ್‌ ಇಂಡಿಯಾದ 2ನೇ ಆವೃತ್ತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೋನಿ ಟಿವಿಯ ಜನಪ್ರಿಯ ಶೋ ʼಶಾರ್ಕ್‌ ಟ್ಯಾಂಕ್‌ ಇಂಡಿಯಾʼದ 2ನೇ ಆವೃತ್ತಿ ಘೋಷಣೆಯಾಗಿದೆ. ಈ ಕುರಿತು ಸೋನಿ ಟಿವಿಯು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು “ಉದ್ಯಮದಲ್ಲಿ ಆಸಕ್ತಿ ಹೊಂದಿದವರಿಗೆ ವ್ಯಾಪಾರವನ್ನು ದೊಡ್ಡದಾಗಿಸಿಕೊಳ್ಳಲು ಸುವರ್ಣಾವಕಾಶ” ಎಂದು ಬರೆದುಕೊಂಡಿದೆ.

ಡ್ರ್ಯಾಗನ್ಸ್‌ ಡೆನ್‌ ಫ್ರಾಂಚೈಸಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಶಾರ್ಕ ಟ್ಯಾಂಕ್‌ ಕಾರ್ಯಕ್ರಮದಲ್ಲಿ ಉದಯೋನ್ಮುಖ ಉದ್ದಿಮೆದಾರರು ತಮ್ಮ ಉದ್ದಿಮೆಗಳ ಕುರಿತಾಗಿ ʼಶಾರ್ಕ್‌ʼಗಳಾಗಿ ಕುಳಿತಿರುವ ಹೂಡಿಕೆದಾರರಿಗೆ ವಿವರಿಸಬೇಕು. ಅವರ ʼಬ್ಯುಸಿನೆಸ್‌ ಐಡಿಯಾʼ ವು ಜಡ್ಜ್‌ಗಳಿಗೆ ಇಷ್ಟವಾದರೆ ಅವರು ಕಂಪನಿಯಲ್ಲಿ ಪಾಲುದಾರಿಕೆ ಖರೀದಿಸುವ ಮೂಲಕ ಬಂಡವಾಳ ಹೂಡಿಕೆ ಮಾಡುತ್ತಾರೆ. ಇದರಿಂದ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುವುದಲ್ಲದೇ ಬಂಡವಾಳ ಹೂಡಿಕೆಯಿಂದಾಗಿ ದೊಡ್ಡಪ್ರಮಾಣದಲ್ಲಿ ವ್ಯಾಪಾರ ಆರಂಭಿಸಲು ಸಹಾಯವಾಗುತ್ತದೆ.
ಶಾರ್ಕ್‌ ಟ್ಯಾಂಕ್‌ ಇಂಡಿಯಾದ ಮೊದಲನೇ ಆವೃತ್ತಿಯು ಅಪಾರ ಪ್ರಮಾಣದಲ್ಲಿ ಜನಮನ್ನಣೆಗಳಿಸಿತ್ತು. ಜೊತೆಗೆ ಅನೇಕ ಉದ್ದಿಮೆದಾರರು ಭಾಗವಹಿಸಿ ತಮ್ಮ ʼಐಡಿಯಾʼಗಳನ್ನು ಪ್ರಸ್ತುತ ಪಡಿಸಿದ್ದರು.  ಅನೇಕ ಸ್ಟಾರ್ಟಪ್‌ ಗಳು ಪ್ರಶಂಸೆಗೆ ಪಾತ್ರವಾಗಿದ್ದವು. ಪ್ರಸ್ತುತ ಅದರ ಎರಡನೇ ಆವೃತ್ತಿಗಾಗಿ ವಿಕ್ಷಕರು ಕಾತರದಿಂದ ಕಾಯುತ್ತಿದ್ದು ಯುವ ಉದ್ದಿಮೆದಾರರು ಕಾರ್ಯಕ್ರಮದಲ್ಲಿ ಭಾಗವಹಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss