April 30, 2026
Thursday, April 30, 2026
spot_img

ಇಡೀ ಬಜೆಟ್‌ನಲ್ಲಿ ಈ ರಾಜ್ಯದ ಹೆಸರು ಬರಲೇ ಇಲ್ಲ, ನಾವೂ ಕಾಯ್ತಾ ಇದ್ವಿ ಎಂದ ಶಶಿ ತರೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮುಕ್ತಾಯವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮುಗಿಸಿದ್ದು, ಇಡೀ ಆಯವ್ಯಯದಲ್ಲಿ ಕೇರಳ ರಾಜ್ಯದ ಹೆಸರು ಬಂದೇ ಇಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ.

ತುಂಬಾ ಏನೂ ಡೀಟೇಲ್ಸ್‌ ಸಿಕ್ಕಿಲ್ಲ, ಮೂರು-ನಾಲ್ಕು ಹೆಡ್‌ಲೈನ್‌ ಕೇಳಿಸಿಕೊಂಡಿದ್ದೇವಷ್ಟೆ. ಅಖಿಲ ಭಾರತ ಆಯುರ್ವೇದ ಸಂಸ್ಥೆಗಾಗಿ ಕಾಯುತ್ತಿದ್ದೆವು, ಅದರ ಹೆಸರು ಕೇಳಲೇ ಇಲ್ಲ. ಅದುನೂ ಕೇರಳದಲ್ಲಿ ಇರಬೇಕು ಅನ್ನೋದು ನಮ್ಮ ನಿರೀಕ್ಷೆಯಾಗಿತ್ತು. ಕೇರಳದಲ್ಲಿ ಆಯುರ್ವೇದಕ್ಕೆ ವರ್ಷಗಳ ಇತಿಹಾಸ ಇದೆ. ಆದರೆ ಗಣನೆಗೆ ತೆಗೆದುಕೊಂಡಿಲ್ಲ ಅನ್ನೋದು ಅಸಮಾಧಾನ ಇದೆ.

ಹಡಗು ದುರಸ್ತಿ ಬಗ್ಗೆ ಮಾತನಾಡುವಾಗ, ಅವರು ವಾರಣಾಸಿ ಮತ್ತು ಪಾಟ್ನಾ ಹೆಸರುಗಳನ್ನು ಉಲ್ಲೇಖಿಸಿದರು ಆದರೆ ಕೇರಳವನ್ನು ಉಲ್ಲೇಖಿಸಲಿಲ್ಲ. ಇದು ಸ್ವಲ್ಪ ಆಶ್ಚರ್ಯಕರವಾಗಿದೆ. ಆದರೆ ಬಹುಶಃ ಬಜೆಟ್ ದಾಖಲೆಯಲ್ಲಿ ಹೆಚ್ಚಿನ ವಿವರಗಳಿವೆ. ನಾನು ಅದನ್ನು ಇನ್ನೂ ಓದಿಲ್ಲ. ಭಾಷಣದಲ್ಲಿ ಬಹಳ ಕಡಿಮೆ ವಿವರಗಳಿದ್ದವು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !