ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಶಶಿ ತರೂರ್ ಕಣ್ಣು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ಶಶಿ ತರೂರ್ ಇಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ಮೂಲಕ ಅಕ್ಟೋಬರ್ 17ರಂದು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ರಹಸ್ಯ ಮಾತುಕತೆ ನಡೆದಿದೆ.

ಶಶಿ ತರೂರ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯೋಜಿಸುತ್ತಿದ್ದಾರೆ ಎಂಬ ಸುಳಿವು ನೀಡಿದ ಬಳಿಕ ಸೋನಿಯಾ ಗಾಂಧಿಯವರನ್ನು ತರೂರ್ ಭೇಟಿ ಮಾಡಿರುವುದು ಸಂಚಲನ ಸೃಷ್ಟಿಸಿದರು. ಆದರೆ, ಅವರು ಈ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಬಹಿರಂಗವಾಗಿ ಅನುಮೋದಿಸಿಲ್ಲ.

ಇಂದು ಶಶಿ ತರೂರ್ ಅವರು ಪಕ್ಷದ ಸಹ ನಾಯಕರಾದ ದೀಪೇಂದರ್ ಹೂಡಾ, ಜೈ ಪ್ರಕಾಶ್ ಅಗರ್ವಾಲ್ ಮತ್ತು ವಿಜೇಂದ್ರ ಸಿಂಗ್ ಅವರೊಂದಿಗೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ.

ಶಶಿ ತರೂರ್ ಅವರು ಜಿ-23 ಕಾಂಗ್ರೆಸ್ ನಾಯಕರ ಗುಂಪಿನ ಭಾಗವಾಗಿಲ್ಲದಿದ್ದರೂ, ಅವರು ಪಕ್ಷದೊಳಗೆ ಸುಧಾರಣೆಗಳನ್ನು ತರುವ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಶಶಿ ತರೂರ್ ಜಿ-23 ನಾಯಕರನ್ನು ಭೇಟಿ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!