March 10, 2026
Tuesday, March 10, 2026
spot_img

ಗಿಳಿಶಾಸ್ತ್ರ ಹೇಳುತ್ತಾ ಐಟಿ ಎಂಪ್ಲಾಯಿಗೆ 35 ಲಕ್ಷ ರೂಪಾಯಿ ಪಂಗನಾಮ ಹಾಕಿದ ಶಾಸ್ತ್ರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಿನ ಕಾಳದಲ್ಲಿ ಗಿಳಿಶಾಸ್ತ್ರ ಯಾರು ನಂಬ್ತಾರೆ ಅನ್ಕೋಬೇಡಿ, ನಂಬಲ್ಲ ಅನ್ನೋರು ಎಷ್ಟು ಜನ ಇದ್ದಾರೋ ನಂಬ್ತೀವಿ ಅನ್ನೋರೂ ಅಷ್ಟೇ ಜನ ಇದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರಿಗೆ ಗಿಳಿಶಾಸ್ತ್ರದ ಹೆಸರಿನಲ್ಲಿ 35 ಲಕ್ಷ ರೂಪಾಯಿ ಪಂಗನಾಮ ಹಾಕಲಾಗಿದೆ.

ವರ್ಗಾವಣೆಯ ಆಸೆಯಿಂದಾಗಿ ಬೆಂಗಳೂರಿನ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ನೀಡಿ ಮೋಸ ಹೋಗಿದ್ದಾರೆ.

ಭಾರತೀನಗರದ ಶ್ರೀ ಸರ್ಕಲ್‌ ಬಳಿ ಗಿಳಿಶಾಸ್ತ್ರ ಹಾಗೂ ಜಾತಕ ನೋಡಿ ಭವಿಷ್ಯ ಹೇಳುವ ಶೇಖರ್‌ ಎನ್ನುವವರ ಪರಿಚಯವಾಗಿತ್ತು. ಜೀವನದಲ್ಲಿ ಅಭಿವೃದ್ಧಿ ಬಯಸಿದ್ದ ಅಧಿಕಾರಿ ಶೇಖರ್‌ ಹೇಳಿದ್ದನ್ನು ನಂಬುತ್ತಿದ್ದರು. ನಿಮ್ಮ ಅಭಿವೃದ್ಧಿಗೆ ಪೂಜೆ ಮಾಡಿಸಿ ಎಂದು ಐವತ್ತು ಸಾವಿರ ರೂಪಾಯಿ ಮೋಸ ಮಾಡಿದ್ದಾರೆ. ಇದಾದ ನಂತರ ನನಗೆ ವರ್ಗಾವಣೆಯಾಗಬೇಕು ಎಂದು ಕೇಳಿದ್ದಾರೆ.

ಆಗ ಶೇಖರ್‌ ವರ್ಗಾವಣೆ ದೊಡ್ಡ ವಿಚಾರ ಇದಕ್ಕೆ ದೊಡ್ಡ ಪೂಜೆ ಆಗಬೇಕು, ಮನೆಯಲ್ಲಿರುವ ಆಭರಣಗಳನ್ನು ದೇವಿಗೆ ಹಾಕಬೇಕು ತನ್ನಿ ಎಂದು ಹೇಳಿದ್ದಾರೆ. ಮಾತನ್ನು ನಂಬಿ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಶೇಖರ್‌ಗೆ ನೀಡಿದ್ದಾರೆ.

ಶೇಖರ್‌ ಪೂಜೆ ನೆರವೇರಿಸಿದ್ದಾರೆ. ಚಿನ್ನ ವಾಪಾಸ್‌ ಕೇಳಿದಾಗ ಒಂದು ದಿನ ದೇವಿಯ ಮೈಮೇಲೆ ಇರಲಿ ಎಂದಿದ್ದಾರೆ. ಒಂದು ದಿನ, ಒಂದು ವಾರವಾಗಿದೆ. ಅದಾದಮೇಲೆ ಶೇಖರ್‌ಗೆ ಕಾಲ್‌ಗೆ ಸಿಕ್ಕಿಲ್ಲ. ಮಾಮೂಲಿ ಜಾಗಕ್ಕೆ ಹೋಗಿ ನೋಡಿದಾಗ ಶೇಖರ್‌ ಕಾಣಿಸಿಲ್ಲ. ಸದ್ಯ ಭಾರತಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !