ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಅವರನ್ನು ಭೇಟಿ ಮಾಡಲು ಅವರ ತಾಯಿ ಮೀನಾ ತೂಗುದೀಪ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಮಗಳ ಜೊತೆ ತಾಯಿ ಮೀನಾ ಜೈಲಿಗೆ ಆಗಮಿಸಿದ್ದಾರೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಅವರ ತಾಯಿ ಭೇಟಿಗೆ ಬಂದಿರಲಿಲ್ಲ. ಇದ್ದಕ್ಕಿದ್ದಂತೆ ದರ್ಶನ್ ಅವರ ತಾಯಿ, ತಂಗಿ ದಿವ್ಯಾ, ಬಾವ ಮಂಜುನಾಥ್ ಹಾಗೂ ಅಕ್ಕನ ಮಕ್ಕಳು ಬಂದು ದರ್ಶನ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಮಗನನ್ನು ನೋಡಿದ ತಾಯಿ ಮಿನಾ ಮತ್ತು ಸಹೋದರಿ ಕಣ್ಣೀರಾಕಿದ್ದಾರೆ.