ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ತಿಂದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ.
14 ವರ್ಷದ ಬಾಲಕಿ ತಮಿಳುನಾಡಿನ ರೆಸ್ಟೋರೆಂಟ್ನಲ್ಲಿ ಚಿಕನ್ ಶವರ್ಮ ಸೇವನೆ ಮಾಡಿದ್ದು, ಹೊಟ್ಟೆನೋವಿನಿಂದ ಬಳಲಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಬಾಲಕಿಯ ಜೊತೆ ಮಾಂಸಾಹಾರ ಸೇವನೆ ಮಾಡಿದ 13 ವಿದ್ಯಾರ್ಥಿಗಳಿಗೂ ಹೊಟ್ಟೆ ನೋವು ಕಾಣಿಸಿದ್ದು, ಅಸ್ವಸ್ಥರಾಗಿದ್ದಾರೆ. ಅಧಿಕಾರಿಗಳು ತಕ್ಷಣವೇ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದು, ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಮೂರವನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.