ಹಣ ಕದ್ದಿದ್ದಾಳೆ : ಐದನೇ ತರಗತಿ ವಿದ್ಯಾರ್ಥಿನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಣ ಕದ್ದಿದ್ದಾಳೆ ಎನ್ನುವ ಶಂಕೆ ಮೇಲೆ ಐದನೇ ತರಗತಿ ವಿದ್ಯಾರ್ಥಿನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಬೆತುಲ್‌ನಲ್ಲಿ ನಡೆದಿದೆ. ದಾಮ್ಜಿಪುರ ಗ್ರಾಮದ ಸರ್ಕಾರಿ ಗಿರಿಜನ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಗೆ ಚಪ್ಪಲಿ ಹಾರ ಹಾಕಿದ್ದು, ಬಾಲಕಿ ಕುಟುಂಬವರು ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಅಮನ್‌ವೀರ್ ಸಿಂಗ್ ಬೈನ್ಸ್ ಕಚೇರಿಗೆ ಬಾಲಕಿ ತಂದೆ ತೆರಳಿ ದೂರು ನೀಡಿದ್ದು, ತನಿಖೆಗೆ ಆದೇಶಿಸಲಾಗಿದೆ. ಹಾಸ್ಟೆಲ್‌ನ ಅಧೀಕ್ಷಕಿ ಸೂಚನೆ ಮೇರೆಗೆ ವಿದ್ಯಾರ್ಥಿಗಳು ಈ ರೀತಿ ನಡೆದುಕೊಂಡಿದ್ದು, ಹಾಸ್ಟೆಲ್ ಸೂಪರಿಂಟೆಂಡೆಂಟ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ದೆವ್ವದ ರೀತಿ ಕಾಣುವ ಹಾಗೆ ಮೇಕಪ್ ಮಾಡಿ, ಚಪ್ಪಲಿ ಹಾರ ಹಾಕಿ ಹಾಸ್ಟೆಲ್ ಆವರಣದಲ್ಲಿ ಮೆರವಣಿಗೆ ಮಾಡಲಾಗಿದೆ. ಇದಾದ ನಂತರದಿಂದ ಹಾಸ್ಟೆಲ್‌ನಲ್ಲಿ ಇರುವುದಿಲ್ಲ ಎಂದು ಮಗಳು ಹೇಳಿದ್ದಾಗಿ ತಂದೆ ದೂರಿದ್ದಾರೆ. ತನಿಖೆಗೆ ಆದೇಶಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತೆ ಶಿಲ್ಪಾ ಜೈನ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!