ಯುಎಇ ನೂತನ ಅಧ್ಯಕ್ಷರಾಗಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಆಡಳಿತಗಾರರು ರಾಷ್ಟ್ರದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಅಬುಧಾಬಿಯ ಅಲ್ ಮುಶ್ರಿಫ್ ಪ್ಯಾಲೇಸ್‌ನಲ್ಲಿ ನಡೆದ ಸಭೆಯಲ್ಲಿ ದೇಶದ ಏಳು ಶೇಖ್‌ಡಮ್‌ಗಳ ಆಡಳಿತಗಾರರು ಈ ನಿರ್ಧಾರ ಕೈಗೊಂಡಿದ್ದಾರೆ .
ಮಾಜಿ ನಾಯಕ ಶೇಖ್ ಖಲೀಫಾ ಅವರ ಮರಣದ ಒಂದು ದಿನದ ನಂತರ ಶೇಖ್ ಮೊಹಮ್ಮದ್ ಅವರನ್ನು ಫೆಡರಲ್ ಸುಪ್ರೀಂ ಕೌನ್ಸಿಲ್ ಆಯ್ಕೆ ಮಾಡಿದೆ. ಇವರು 1971 ರಲ್ಲಿ ಅವರ ತಂದೆ ಸ್ಥಾಪಿಸಿದ ತೈಲ ಸಮೃದ್ಧ ದೇಶದ ಆಡಳಿತಗಾರರಾಗಿ ಆಯ್ಕೆ ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!