ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಆರ್ಟಿಲರಿ ಶಾಲೆಯಲ್ಲಿ ಫೈರಿಂಗ್ ಅಭ್ಯಾಸದ ವೇಳೆ ಶೆಲ್ ಸ್ಫೋಟದಲ್ಲಿ ಇಬ್ಬರು ಅಗ್ನಿವೀರ್’ಗಳು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಗುರುವಾರ ಮಧ್ಯಾಹ್ನ ನಾಸಿಕ್ ರೋಡ್ ಪ್ರದೇಶದ ಕೇಂದ್ರದಲ್ಲಿ ಭಾರತೀಯ ಫೀಲ್ಡ್ ಗನ್ ನಿಂದ ಶೆಲ್ ಸ್ಫೋಟಗೊಂಡಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿತ್ (21) ಎಂದು ಗುರುತಿಸಲಾಗಿದೆ. ತರಬೇತಿಗಾಗಿ ಹೈದರಾಬಾದ್‌ನಿಂದ ಬಂದಿದ್ದರು ಎನ್ನಲಾಗಿದೆ.
“ಅಗ್ನಿವೀರ್‌ಗಳ ತಂಡವು ಫೀಲ್ಡ್ ಗನ್‌ನಿಂದ ಗುಂಡು ಹಾರಿಸುತ್ತಿದ್ದಾಗ ಒಂದು ಶೆಲ್ ಸ್ಫೋಟಿಸಿತು. ಅವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಡಿಯೋಲಾಲಿಯಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ”ಎಂದು ಹೇಳಿದ್ದಾರೆ.