ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಸುಳ್ಯದಲ್ಲಿ ಅಪರೂಪದ ಫಲಿತಾಂಶವೊಂದು ಬಂದಿದೆ!
ಹೌದು, ಫಲಿತಾಂಶ ಸರಿ, ಅಪರೂಪದ ಫಲಿತಾಂಶ ಏನು ಅಂತೀರಾ? ಇಲ್ಲಿ ತಾಯಿ ಮಗಳು ಇಬ್ಬರೂ ಒಟ್ಟಿಗೇ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.
ಸುಳ್ಯದ ಜಯನಗರದ ರಮೇಶ್ ಪತ್ನಿ ಗೀತಾ ಹಾಗೂ ಪುತ್ರಿ ತ್ರಿಷಾ ಒಂದೇ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಅಮ್ಮ ಕಲಾ ವಿಭಾಗದ ಪರೀಕ್ಷೆ ಬರೆದರೆ ಮಗಳು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾಳೆ.
ಸುಳ್ಯ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಜೊತೆಗೆ ಅಧ್ಯಯನ ನಡೆಸಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಮ್ಮ 45ನೇ ವಯಸ್ಸಿನಲ್ಲಿಯೂ ಪರೀಕ್ಷೆ ಬರೆಯಬೇಕು ಎನ್ನುವ ಉತ್ಸಾಹ ಗೀತಾಗಿದ್ದು, ಮನೆಯವರ ಪ್ರೋತ್ಸಾಹದಿಂದ ಪರೀಕ್ಷೆ ಎದುರಿಸಿದ್ದಾರೆ.
24 ವರ್ಷದ ಹಿಂದೆ ಗೀತಾ ಹೈಸ್ಕೂಲ್ ಓದು ನಿಲ್ಲಿಸಿದ್ದರು, ಎರಡು ವರ್ಷದ ಹಿಂದೆ ಶ್ರಮ ಹಾಕಿ ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸಾದರು. ಇದೀಗ ಗಾಂಧಿನಗರ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಬರೆದು 249 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಕೆಲಸ, ಮನೆಕೆಲಸ, ಸಂಸಾರದ ನಡುವೆಯೂ ಅಭ್ಯಾಸ ನಡೆಸಿ ಛಲದಿಂದ ಪರೀಕ್ಷೆ ಬರೆದು ಪಾಸ್ ಆಗಿರುವ ಗೀತಾ ಖುಷಿಯಲ್ಲಿದ್ದಾರೆ, ಒಟ್ಟಿಗೇ ಪಾಸ್‌ಆದ ಅಮ್ಮ ಮಗಳಿಗೆ ಎಲ್ಲರೂ ಕಂಗ್ರಾಜುಲೇಷನ್ಸ್ ಹೇಳಿ..