ಪ್ರೆಗ್ನೆನ್ಸಿ ಗಾಸಿಪ್‌ಗೆ ಉತ್ತರ ಕೊಟ್ಟ ಶಿಬಾನಿ ದಾಂಡೇಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಜೋಡಿ ಶಿಬಾನಿ ದಾಂಡೇಕರ್ ಹಾಗೂ ಫರಾನ್ ಅಕ್ತರ್ ಈಗಿನ್ನೂ ಮದುವೆಯಾಗಿದ್ದಾರೆ. ಫರಾನ್ ಅಖ್ತರ್‌ಗೆ ಇದು ಎರಡನೇ ಮದುವೆ, ಮೂರು ವರ್ಷಗಳಿಂದ ಜೊತೆಯಾಗಿದ್ದ ಈ ಜೋಡಿ ಇತ್ತೀಚೆಗಷ್ಟೇ ಹಸೆಮಣೆ ಏರಿತ್ತು. ಮದುವೆಯಾಗಿ ತಿಂಗಳಾದರೂ ಇದೀಗ ವಿವಾಹದ ಫೋಟೊಗಳನ್ನು ಈಗಷ್ಟೇ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಗಾಸಿಪ್ ಒಂದು ಎದ್ದಿದೆ. ಲಿವ್‌ಇನ್‌ನಲ್ಲಿದ್ದ ಶಿಬಾನಿ ಮದುವೆ ಸಮಯದಲ್ಲೇ ಪ್ರೆಗ್ನೆಂಟ್ ಎಂಬ ಗುಸುಗುಸು ಕೇಳಿಬರುತ್ತಿದೆ. ಮದುವೆ ಸಮಯದಲ್ಲಿ ಅವರ ಫೋಟೊಗಳಲ್ಲಿ ಬೇಬಿ ಬಂಪ್ ಎದ್ದು ಕಾಣುತ್ತದೆ. ಇದಕ್ಕೆ ಶಿಬಾನಿ ಉತ್ತರ ನೀಡಿದ್ದು, ತಮ್ಮ ವರ್ಕೌಟ್ ಫೋಟೊ ಒಂದನ್ನು ಹಾಕಿ ನಾನು ಪ್ರೆಗ್ನೆನಂಟ್ ಅಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!