ಶಿವಮೊಗ್ಗ-ಬೆಂಗಳೂರು ಇ-ಬಸ್ ಸೇವೆ ಆರಂಭ, ಚಿಕ್ಕಮಗಳೂರಿಗೂ ಎಲೆಕ್ಟ್ರಿಕ್ ಬಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹಾಗೂ ಮೈಸೂರು ನಗರಕ್ಕೆ ಸೀಮಿತವಾಗಿದ್ದ ಎಲೆಕ್ಟ್ರಿಕ್ ಬಸ್‌ಗಳು ಇದೀಗ ಮಲೆನಾಡಿನತ್ತ ಮುಖಮಾಡಿವೆ.

ರಾಜ್ಯದ ವಿವಿಧೆಡೆ ಇ-ಬಸ್ ಓಡಾಟ ಆರಂಭವಾಗಿದ್ದು, ಇದೀಗ ಶಿವಮೊಗ್ಗ-ಬೆಂಗಳೂರು ನಡುವೆ ಓಡಾಟ ಆರಂಭವಾಗಿದೆ. ಈಗಾಗಲೇ ಶಿವಮೊಗ್ಗದಿಂದ ಬಸ್ ಬೆಂಗಳೂರಿಗೆ ತೆರಳಿದೆ. ಬಸ್ ಹೊರಡುವ ಮುನ್ನ ಡಿಪೋ ಸಿಬ್ಬಂದಿ ಬಸ್‌ಗೆ ಪೂಜೆ ಸಲ್ಲಿಸಿ, ಪ್ರತಿ ದಿನವೂ ಯಾವುದೇ ಅವಘಡಗಳು ಸಂಭವಿಸದಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈಗಾಗಲೇ ಬೆಂಗಳೂರು-ಚಿಕ್ಕಮಗಳೂರು ನಡುವೆ ಬಸ್ ಸಂಚಾರ ಆರಂಭವಾಗಿದ್ದು, ಇವಿ ಪವರ್ ಪ್ಲಸ್ ಹೆಸರಿನ ಬಸ್ ಇದಾಗಿದೆ. ಬರೀ ಚಿಕ್ಕಮಗಳೂರು-ಬೆಂಗಳೂರು ಅಷ್ಟೇ ಅಲ್ಲ, ಬೇಲೂರು ಹಾಗೂ ಹಾಸನದಲ್ಲಿಯೂ ಇ-ಬಸ್ ಸಂಚಾರ ಆರಂಭವಾಗಿದೆ.

ಕೆಎಸ್‌ಆರ್‌ಟಿಸಿ ವೆಬ್‌ಸೈಟನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ, ಟಿಕೆಟ್ ದರ 600 ರೂಪಾಯಿಯಷ್ಟಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಬಸ್ ಹೊರಡಲಿದ್ದು, ಸಂಜೆ ಆರು ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಅದೇ ಬಸ್ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಸಂಪೂರ್ಣ ಹವಾನಿಯಂತ್ರಿತ ಬಸ್ ಇದಾಗಿರಲಿದ್ದು, ಎಮರ್ಜೆನ್ಸಿ ಬಟನ್ಸ್, ಸಿಸಿ ಕ್ಯಾಮೆರಾ, ಫಸ್ಟ್ ಏಡ್ ವ್ಯವಸ್ಥೆ ಇದೆ. ಒಮ್ಮೆ ಬಸ್ ಚಾರ್ಜ್ ಮಾಡಲು ಎರಡೂ ವರೆ ಗಂಟೆ ಕಾಲಾವಕಾಶ ಬೇಕಿದ್ದು, ಒಮ್ಮೆ ಚಾರ್ಜ್ ಆದರೆ 300 ಕಿ.ಮೀವರೆಗೂ ಯಾವುದೇ ಚಿಂತೆ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!