ಹೊಸದಿಗಂತ ಡಿಜಿಟಲ್ ಡೆಸ್ಕ್:
ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ ಕೋಮು ಸಂಘರ್ಷ ನಡೆದಿದ್ದು, ಗಾಯಗೊಂಡವರನ್ನು ಮೆಗ್ಗಾನ್ ಆಪತ್ರೆಗೆ ದಾಖಲಿಸಲಾಗಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.
ರೋಹನ್, ಧನಂಜಯ್, ಮಾರುತಿ, ಪ್ರದೀಪ್. ಕಿರಣ್, ಭರತ್ ಹಾಗೂ ಶಾಂತಮ್ಮ ಕಲ್ಲು ತೂರಾಟದ ವೇಳೆ ಗಾಯಗೊಂಡಿದ್ದಾರೆ.
ಮೆರವಣಿಗೆ ವೇಳೆ ಯಾರಾದರೂ ತಲ್ವಾರ್ ತಗೋತಾರಾ? ಸರ್ಕಾರ ತಲೆ ತಗ್ಗಿಸುವ ವಿಚಾರವಿದು, ತಲ್ವಾರ್ ಹಿಡಿದುಕೊಂಡು ಹಿಂದೂಗಳಿಗೆ ಎಚ್ಚರಿಕೆ ಕೊಡ್ತಿದ್ದಾರಾ? ಎಂದು ಕಾಂಗ್ರೆಸ್ ಸರ್ಕಾರವನ್ನು ದೂರಿದ್ದಾರೆ.