ಬಿರುಗಾಳಿಗೆ ಹೊಡೆತಕ್ಕೆ ಹಡಗು ಮುಳುಗಡೆ: 4 ಭಾರತೀಯರು ಸಹಿತ 13 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗ್ರೀಸ್‌ನ ಲೆಸ್‌ಬೋಸ್‌ ದ್ವೀಪದ ಬಳಿ ಉಪ್ಪು ಸಾಗಿಸುತ್ತಿದ್ದ ಹಡಗೊಂದು ಭಾನುವಾರ ಮುಳುಗಡೆಯಾಗಿದೆ. ಅದರಲ್ಲಿದ್ದ 14 ಸಿಬ್ಬಂದಿಯ ಪೈಕಿ ಒಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ಕಾಣೆಯಾಗಿದ್ದುದು.ಎಂದು ಗ್ರೀಸ್‌ನ ಕರಾವಳಿ ಕಾವಲುಪಡೆ ಹೇಳಿದೆ.

ಸಿಬ್ಬಂದಿ ಪೈಕಿ 8 ಮಂದಿ ಈಜಿಪ್ಟ್‌ನವರಾದರೆ, ಮಿಕ್ಕವರು ಸಿರಿಯಾ ಮತ್ತು ಭಾರತೀಯರಾಗಿದ್ದರು ಎಂದು ಹೇಳಲಾಗಿದೆ.

ಕೊಮೊರೊಸ್‌ನಲ್ಲಿ ನೋಂದಾಯಿಸಲಾದ ಈ ನೌಕೆಯು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ ಇಸ್ತಾನ್‌ಬುಲ್‌ಗೆ 6,000 ಟನ್ ಉಪ್ಪನ್ನು ಹೊತ್ತೊಯ್ಯುತ್ತಿತ್ತು ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

8 ಈಜಿಪ್ಟ್​ ನಾಗರಿಕರು, ನಾಲ್ವರು ಭಾರತೀಯರು ಮತ್ತು ಇಬ್ಬರು ಸಿರಿಯಾ ಪ್ರಜೆ ಸೇರಿ 14 ಸಿಬ್ಬಂದಿ ಇದರಲ್ಲಿದ್ದರು. ಬೆಳಗ್ಗೆ 7 ಗಂಟೆಗೆ ಯಾಂತ್ರಿಕ ದೋಷದ ಕುರಿತು ನೌಕೆಯಿಂದ ಸಂಕೇತ ಬಂದಿತು. ಇದಾದ ಸ್ವಲ್ಪ ಸಮಯದ ನಂತರ ಲೆಸ್ಬೋಸ್‌ನ ನೈಋತ್ಯಕ್ಕೆ ಅಂದಾಜು 4 1/2 ನಾಟಿಕಲ್ ಮೈಲುಗಳಲ್ಲಿ (8 ಕಿಮೀ) ಹಡಗು ಕಣ್ಮರೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಜಿಪ್ಟ್​ನ ಪ್ರಜೆಯೊಬ್ಬರನ್ನು ರಕ್ಷಿಸಲಾಗಿದೆ. ಎಂಟು ವ್ಯಾಪಾರಿ ಹಡಗುಗಳು, ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಗ್ರೀಕ್ ನೌಕಾಪಡೆಯ ಬದುಕುಳಿದವರಿಗಾಗಿ ಹುಡುಕುತ್ತಿವೆ. ಈ ಪ್ರದೇಶದಲ್ಲಿ ಪ್ರತಿ ಗಂಟೆಗೆ 80 ಕಿಮೀ (50 mph) ವೇಗದಲ್ಲಿ ಗಾಳಿ ಬೀಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!