ಜಪಾನ್ ನ ಸಮುದ್ರದಲ್ಲಿ ಮುಳುಗಿದ ಹಡಗು: 24 ಮೀನುಗಾರರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್ ರಾಜಧಾನಿ ಟೋಕಿಯೊದ ನೈರುತ್ಯ ಭಾಗದ ದ್ವೀಪ ಪ್ರದೇಶದ ಸಮುದ್ರದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಜಪಾನ್‌ನ ಕರಾವಳಿ ಕಾವಲು ಪಡೆಯು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದೆ.

ಈ ರಕ್ಷಣಾಕಾರ್ಯದಲ್ಲಿ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜಪಾನ್‌ನ ಯೈಝು ಬಂದರು ಪ್ರದೇಶದಿಂದ ಫುಕುಯಿ ಮಾರು-8 ಹೆಸರಿನ ಹಡಗು ಮೀನುಗಾರರನ್ನು ಹೊತ್ತು ದಕ್ಷಿಣ ಅಮೆರಿಕಕ್ಕೆ ತೆರಳುತ್ತಿತ್ತು. ಈ ವೇಳೆ ಹಡಗಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಪೆಸಿಫಿಕ್‌ ಸಾಗರದಲ್ಲಿ ಬೀಸಿದ ಬೃಹತ್ ಗಾಳಿಯಿಂದಾಗಿ ಹಡಗು ದಾರಿ ತಪ್ಪಿತ್ತು. ಈ ವೇಳೆ ಮೀನುಗಾರರ ರಕ್ಷಣೆಗಾಗಿ ಮೂರು ಗಸ್ತು ಹಡಗುಗಳು, ವಿಶೇಷ ರಕ್ಷಣಾ ತಂಡಗಳನ್ನು ಒಳಗೊಂಡ ಮೂರು ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ, ಈ ತಂಡ ಬರುವ ಮುನ್ನವೇ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಈ ಹಡಗಿನಲ್ಲಿ ಇಂಡೊನೇಷ್ಯಾದ 20 ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಹಾಗೂ ಕ್ಯಾಪ್ಟನ್ ಸೇರಿದಂತೆ ಜಪಾನ್‌ನ ಐವರು ಪ್ರಜೆಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!