ಹೊಸದಿಗಂತ ವರದಿ,ಅಂಕೋಲಾ :
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಚಾಲಕನೋರ್ವನ ಶವದ ಗುರುತು ಗುರುವಾರ ಡಿ.ಎನ್.ಎ ಟೆಸ್ಟ್ ಮೂಲಕ ದೃಢಪಟ್ಟಿದೆ.
ತಮಿಳುನಾಡು ರಾಜ್ಯದ ಪಪ್ಪಿನೈಕೆನಟ್ಟಿ ನಾಮಕಲ್‌ನ ಕರಯನ್ ಪುದೂರು, ಮಾರಿಯಮ್‌ನ್ ಕೊವಿಲ್ ನಿವಾಸಿ ಶರವಣನ್ ತಂದೆ ಷಣ್ಮುಗಮ್ (೩೮) ಗ್ಯಾಸ್ ಟ್ಯಾಂಕರ್ ನ ಚಾಲಕನಾಗಿದ್ದು ಈತನ ತಾಯಿ ಮೋಹನಾ ಷಣ್ಮುಗಮ್ ಅಂಕೋಲಾ ಠಾಣೆಯಲ್ಲಿ ತನ್ನ ಮಗ ನಾಪತ್ತೆಯಾಗಿರುವ ದೂರು ನೀಡಿದ್ದಳು.
ಮಧ್ಯೆ ಶುಕ್ರವಾರ ರಾತ್ರಿ ತಾಲೂಕಿನ ಬೆಳಂಬಾರ ಕಡಲ ತೀರದಲ್ಲಿ ಸೊಂಟದಿಂದ ಕೆಳಗಿನ ಭಾಗ ಮಾತ್ರ ಇರುವ ಕೊಳೆತ ಶವ ಪತ್ತೆಯಾಗಿತ್ತು. ಇದನ್ನು ಡಿ.ಎನ್.ಎ ಪರೀಕ್ಷೆಗೆ ಕಳಿಸಲಾಗಿತ್ತು. ಅದೀಗ ಶರವಣನ್ ಅವರದ್ದು ಎಂದು ದೃಡಪಟ್ಟಿದೆ.