ಹೊಸದಿಗಂತ ಅಂಕೋಲಾ :
ಶಿರೂರು ಗುಡ್ಡ ಕುಸಿತದಿಂದ ಆಗಿರುವ ಅವಘಡದ ಹಿನ್ನೆಲೆಯಲ್ಲಿ ಗಂಗಾವಳಿ ನದಿಯಲ್ಲಿ ಕೇರಳದ ಟ್ರಕ್ ಪತ್ತೆಗಾಗಿ ,ದೆಹಲಿಯ ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್ ನಡೆಸಿದ ದ್ರೋಣ ಕಾರ್ಯಾಚರಣೆಯ ವರದಿಯನ್ನು ಶನಿವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಜೊತೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾರಿಗೆ ಸಲ್ಲಿಸಿದೆ. ಈ ಸಂಸ್ಥೆಯ ಅಧ್ಯಯನದಂತೆ ಗಂಗಾವಳಿ ನದಿಯಲ್ಲಿ ಟ್ರಕ್ ಅಥವಾ ಘನ ವಸ್ತು ಇರುವ ಸಂಭಾವ್ಯ ನಾಲ್ಕು ಬಿಂದುಗಳನ್ನು ಗುರುತಿಸಲಾಗಿದೆ. ಸೋನಾರ್, ಥರ್ಮಲ್ ಇಮೇಜರ್, ಮ್ಯಾಗ್ನೆಟ್ ಲೈನ್‌ಗಳು ಮತ್ತು ಡೈಬೋಡ್ಸ್ ಡೇಟಾದ ವ್ಯಾಖ್ಯಾನ, ಚಿತ್ರದಲ್ಲಿ ತೋರಿಸಿರುವಂತೆ ನಾಲ್ಕು ಸಂಪರ್ಕ ಬಿಂದುಗಳನ್ನು (CP) ಗುರುತಿಸಲಾಗಿದೆ.
ಮೊದಲನೆಯದಾಗಿ CP4 ಬಿಂದುವು ಟ್ರಕ್‌ನ ರೂಪಕ್ಕೆ ತೀರ ಹತ್ತಿರದ ಹೋಲಿಕೆ ನೀಡಿದೆ. ಇದು ಭೂಮಿ ಮತ್ತು ಬಂಡೆಗಳ ನಿಕ್ಷೇಪದೊಂದಿಗೆ ಓರೆಯಾದ ರಚನೆಯಲ್ಲಿ ಹುದುಗಿದೆ ಮತ್ತು ಭಾಗಶಃ ಹಾನಿಯ ಹೆಚ್ಚಿನ ಸಂಭವನೀಯತೆಯೊಂದಿಗೆ ಕ್ಯಾಬಿನ್ ಮೇಲ್ಮುಖವಾಗಿರುತ್ತದೆ. ಡೈಎಲೆಕ್ಟ್ರಿಕ್ ಡೇಟಾ ಬ್ಯಾಂಕ್ ನಿರ್ಬಂಧಗಳ ಕಾರಣದಿಂದಾಗಿ ಮಾನವ ರೂಪದ ಉಪಸ್ಥಿತಿಯನ್ನು ಖಚಿತವಾಗಿ ಕಂಡುಹಿಡಿಯಲಾಗಲಿಲ್ಲ. ಈ ಬಿಂದುವು ರಾ.ಹೆ.ಯ ದುರಂತ ಸ್ಥಳದಿಂದ 132 ಮೀ. ದೂರದಲ್ಲಿದೆ.
ಇನ್ನುಳಿದ CP3(110ಮೀ), CP2(65ಮೀ) ಮತ್ತು CP1( 165 ಮೀ) ಬಿಂದುಗಳು ಟ್ರಕ್ ಇರುವಿಕೆಯ ಕಡಿಮೆ ಸಂಭವನೀಯತೆಯನ್ನು ಹೊಂದಿವೆ. ಇವು ಕಣ್ಮರೆಯಾದ ಇನ್ನಿತರ ವಸ್ತುಗಳ ಇರುವಿಕೆಯ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದು ವರದಿ ತಿಳಿಸಿದೆ. ಈ ವರದಿ ಈಗ ಕೇರಳದ ಟ್ರಕ್ ಶೋಧಕ್ಕೆ ಮಹತ್ವದ ಸಾಕ್ಷ್ಯವಾಗಿದೆ.