ಹೊಸದಿಗಂತ ಅಂಕೋಲಾ:
ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತಕ್ಕೆ ಒಂದು ತಿಂಗಳು ತುಂಬಿದ್ದು ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಭಾರತೀಯ ನೌಕಾದಳದ ಮುಳುಗು ತಜ್ಞರ ತಂಡ ಬೆಳಿಗ್ಗೆಯಿಂದ ಕಾರ್ಯಾಚರಣೆಗೆ ಇಳಿದಿದ್ದು ನದಿಯ ಆಳದಲ್ಲಿ ವಿಶೇಷ ಟಾರ್ಚ ಬಳಸಿ ಶೋಧ ನಡೆಸಲಾಗುತ್ತಿದೆ.
ನದಿಯ 50 ಮೀಟರ್ ಆಳದಲ್ಲಿ ಲಾರಿಯ ಹಗ್ಗದ ತುಂಡುಗಳು ಕಂಡು ಬಂದಿದ್ದು ಆ ಭಾಗದಲ್ಲಿ ನದಿಯ ಆಳದ ಕುರಿತು ಅಧ್ಯಯನ ನಡೆಸಲಾಗುತ್ತಿದೆ.