ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಏಕನಾಥ್ ಶಿಂಧೆ ತಮ್ಮ ಜೊತೆ 37ಕ್ಕೂ ಶಾಸಕರನ್ನು ಕರೆದುಕೊಂಡು ಗುವಾಹಟಿಯ ರಾಡಿಸನ್ ಬ್ಲೂ ಹೊಟೇಲ್‌ನಲ್ಲಿ ಬೀಡುಬಿಟ್ಟಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರ ಬಿದ್ದುಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಇದೀಗ ಏಕನಾಥ್ ಶಿಂಧೆ ವಿರುದ್ಧ ಶಿವಸೇನೆ ಬೆಂಬಲಿಗರು ಪ್ರತಿಭಟನೆಗಿಳಿದಿದ್ದಾರೆ.
ನಾಸಿಕ್‌ನಲ್ಲಿ ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರ ಚಿತ್ರವಿರುವ ಪೋಸ್ಟರ್‌ಗೆ ಶಿವಸೇನೆ ಬೆಂಬಲಿಗರು ಕಪ್ಪು ಶಾಯಿ ಮತ್ತು ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಂಧೆ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.
#WATCH Shiv Sena supporters throw black ink and eggs at a poster showing a picture of rebel MLA Eknath Shinde, also raise slogans against him, in Nashik pic.twitter.com/DUtKE2R2S5
— ANI (@ANI) June 24, 2022