January19, 2026
Monday, January 19, 2026
spot_img

ಶಿವಸೇನೆಯಿಂದ ಮೇಯರ್ ಆದ್ರೆ ಬಾಳಾ ಠಾಕ್ರೆಗೆ ಗೌರವ: ಏಕನಾಥ್ ಶಿಂಧೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿಯಲ್ಲಿ ಈಗ ಮೇಯರ್ ಪಟ್ಟಕ್ಕಾಗಿ ಫೈಟ್ ಆರಂಭವಾಗಿದೆ.

ಶಿವಸೇನೆಯಿಂದ ಮೇಯರ್ ಆದ್ರೆ ಬಾಳಾ ಠಾಕ್ರೆ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರಿಗೆ ನೀಡುವ ಗೌರವ ಎಂದು ಶಿವಸೈನಿಕರ ಒಂದು ವರ್ಗ ನಂಬುತ್ತದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ.

ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಶಿವಸೇನೆ ಮಿತ್ರಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ವಾಗ್ವಾದ ನಡೆಸುತ್ತಿದೆ ಎಂಬ ವರದಿಗಳ ನಡುವೆಯೇ ಶಿಂಧೆ ಅವರು ಈ ಹೇಳಿಕೆ ನೀಡಿದ್ದಾರೆ.

ಕಳೆದ ವಾರ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಹೊಸ ರಾಜಕೀಯ ಸಮೀಕರಣಗಳ ವರದಿಗಳನ್ನು ತಳ್ಳಿಹಾಕಿದ ಶಿಂಧೆ, ಮುಂಬೈನಲ್ಲಿ ಮಹಾಯುತಿ ಮೇಯರ್ ಇರುತ್ತಾರೆ ಎಂದು ಒತ್ತಿ ಹೇಳಿದರು.

Must Read