ಹೊಸದಿಗಂತ ವರದಿ, ಬಾಗಲಕೋಟೆ:
ನವನಗರದ ಅನುಷ್ ಪೆಟ್ರೋಲ್ ಬಂಕ್ ಬಳಿ ಗುರುತಿಸಲಾಗಿದ್ದ ಜಾಗದಲ್ಲಿ ರಾತ್ರೋ ರಾತ್ರಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೊಂಡಿದೆ.
ಬೃಹದಾಕಾರದ ಶಿವಾಜಿ ಪ್ರತಿಮೆ ಅನಾವರಣಕ್ಕೆ ಈ ಮೊದಲೇ ಜಾಗ ನಿಶ್ಚಯಿಸಲಾಗಿತ್ತು, ಆದರೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂಬ ಅರೋಪ ಕೇಳಿ ಬಂದ ಹಿನ್ನೆಲೆ ಈ ವಿಚಾರ ವಿವಾದಕ್ಕೆ ಸಿಲುಕಿತ್ತು.
ಇದೀಗ ರಾತ್ರೋ ರಾತ್ರಿ 5 ಅಡಿ ಶಿವಾಜಿ ಪ್ರತಿಮೆ ಅನಾವರಣಗೊಂಡಿದ್ದು, ನಿಯೋಜಿತ ಸ್ಥಳದಲ್ಲಿ ಪ್ರತಿಷ್ಠಾಪನೆಗೊಳ್ಳಬೇಕಿರುವ ಪ್ರತಿಮೆಯನ್ನು ಹಾಗೆಯೇ ಇರಿಸಲಾಗಿದೆ. ಮೂರ್ತಿಯನ್ನು ಯಾರು ಪ್ರತಿಷ್ಠಾಪಿಸಿದ್ದಾರೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.
ವಿಷಯ ತಿಳಿದು ಮಾಜಿ ಎಂಎಲ್ಸಿ ನಾರಾಯಣಸಾ ಭಾಂಡಗೆ ನೇತೃತ್ವದಲ್ಲಿ ಮರಾಠ ಸಮಾಜದ ಮುಖಂಡರು ಸ್ಥಳಕ್ಕೆ ಧಾವಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.