Sunday, October 1, 2023

Latest Posts

HEALTH | ವೇಗವಾಗಿ ಹರಡುತ್ತಿರೋ ಕಾಂಜಕ್ಟಿವಿಟಿಸ್‌ನ( ರೆಡ್ ಐ) ಲಕ್ಷಣಗಳೇನು? ಗುಣಪಡಿಸೋದು ಹೇಗೆ?

ರಾಜ್ಯದಲ್ಲಿ ರೆಡ್‌ಐ ಸಮಸ್ಯೆ ವೇಗವಾಗಿ ಹರಡುತ್ತಿದ್ದು, ಇದು ಒಬ್ಬರಿಂದ ಒಬ್ಬರಿಗೆ ಹರಡುವ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗಿದೆ. ರೆಡ್‌ಐ ಲಕ್ಷಣಗಳೇನು? ಪರಿಹಾವೇನು? ಇಲ್ಲಿದೆ. ಮಾಹಿತಿ..

ಲಕ್ಷಣಗಳು..

  • ಕಣ್ಣುಗಳು ಏಕಾಏಕಿ ಕೆಂಪಾಗುವುದು
  • ಎರಡೂ ಕಣ್ಣುಗಳಲ್ಲಿ ಕೆರೆತ
  • ಕಣ್ಣಿನಲ್ಲಿ ಧೂಳು ಸೇರಿದೆ, ತೆಗೆಯಬೇಕು ಎನಿಸುತ್ತದೆ
  • ಕಣ್ಣಿನಿಂದ ನೀರು ಸುರಿಯುವುದು
  • ಬೆಳಗ್ಗೆ ಎದ್ದಾಗ ಕಣ್ಣು ಬಿಡಲು ಆಗದೇ ಇರುವುದು
  • ಹೆಚ್ಚು ಲೈಟ್ ನೋಡಲು ಆಗದಿರುವುದು
  • ಕಣ್ಣು ಚುಚ್ಚಿದಂತಾಗುವುದು

ಪರಿಹಾರ ಏನು?
ಸಾಮಾನ್ಯವಾಗಿ ರೆಡ್‌ಐ ತಾನಾಗೇ ಹೋಗಲು ೭-೧೪ ದಿನ ತೆಗೆದುಕೊಳ್ಳುತ್ತದೆ. ಅದಾಗೆಯೇ ಹೋಗಬೇಕೆಂದರೆ ಇಷ್ಟು ಸಮಯ ಕಾಯಬೇಕು, ಇಲ್ಲವಾದಲ್ಲಿ ವೈದ್ಯರನ್ನು ಸಂಪರ್ಕಿಸಿ. ಆಂಟಿಬ್ಯಾಕ್ಟೀರಿಯಲ್ ಐ ಡ್ರಾಪ್ಸ್‌ನಿಂದ ರಿಲೀಫ್ ಸಿಗುತ್ತದೆ.

ಕಣ್ಣು ಮುಟ್ಟಿಕೊಂಡ ನಂತರ ತಕ್ಷಣ ಹ್ಯಾಂಡ್‌ವಾಶ್ ಬಳಸಿ ಕೈ ತೊಳೆಯಿರಿ, ಅಥವಾ ಸ್ಯಾನಿಟೈಸರ್ ಬಳಕೆ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!