ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಬಗ್ಗೆ ಉಡಾಫೆಯಿಂದ ಮಾತನಾಡಿರೋ ಸಚಿವ ಶಿವಾನಂದ್ ಪಾಟೀಲ್ ಈಕೂಡಲೇ ಕ್ಷಮೆ ಕೇಳಬೇಕು.
ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು, ಹೇಳಿಕೆಯಿಂದಾಗಿ ರೈತರ ಮನಸ್ಸಿಗೆ ನೋವಾಗಿದೆ. ಅನ್ನದಾತನ ಕಷ್ಟ, ಸಂಕಷ್ಟದ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ವಿಷಯಗಳ ಬಗ್ಗೆ ಸೂಕ್ಷ್ಮ ಮುಖ್ಯ.
ರೈತರ ಆತ್ಮಹತ್ಯೆ ನೆನಪು ಮಾಡಿಕೊಂಡ್ರೆ ಈಗಲೂ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ಅವನ ಹಕ್ಕನ್ನು. ಈಗಲೇ ಕ್ಷಮೆ ಕೇಳಿ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಎಂದಿದ್ದಾರೆ.