ಹೊಳಪು ಕಳೆದುಕೊಳ್ಳಲಿಕ್ಕಿದೆಯಾ ಸೋಶಿಯಲ್ ಮೀಡಿಯಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗಾರ್ಟನರ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ 2025ರ ವೇಳೆಗೆ ಈಗ ಸಾಮಾಜಿಕ ಮಾಧ್ಯಮವನ್ನು ಬಳಕೆ ಮಾಡುತ್ತಿರುವವರ ಪೈಕಿ ಶೇ. 50ರಷ್ಟು ಮಂದಿ ಒಂದೋ ಆ ತಾಣಗಳನ್ನೇ ತೊರೆಯುತ್ತಾರೆ, ಇಲ್ಲವೇ ಅವುಗಳ ಬಳಕೆಯನ್ನು ಮಿತಿಗೊಳಿಸಲಿದ್ದಾರೆ.

ಈ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರ ಪೈಕಿ ಶೇ. 53ರಷ್ಟು ಮಂದಿ, ಐದು ವರ್ಷ ಕಾಲ ಹಿಂದಕ್ಕೆ ಹೋಲಿಸಿದರೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಗುಣಮಟ್ಟ ಕುಸಿತಗೊಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದರಿಂದ ಸಾಮಾಜಿಕ ಮಾಧ್ಯಮ ಉಪಯೋಗಿಸಿಕೊಂಡು ಡಿಜಿಟಲ್ ಮಾರ್ಕೆಂಟಿಂಗ್ ಕಾರ್ಯದಲ್ಲಿ ತೊಡಗಿದ್ದವರಿಗೆ ಸವಾಲು ಎದುರಾಗಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. ತಮ್ಮ ಸ್ವಂತ ಜೀವನದ ಘಟನಾವಳಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅಭ್ಯಾಸ ಕ್ರಮೇಣ ಕಡಿಮೆಯಾಗುತ್ತ ಬರುತ್ತಿದೆ ಎಂದೂ ಸಮೀಕ್ಷೆ ವಿಶ್ಲೇಷಿಸಿದೆ.

ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಉಪಯೋಗಿಸಿ, ಕಲ್ಪನಾತ್ಮಕ ಚಿತ್ರ ಮತ್ತು ಮನರಂಜನೆ ಸರಕುಗಳು ಸೃಷ್ಟಿಯಾಗುತ್ತಿರುವುದರ ಬಗ್ಗೆ ಬಳಕೆದಾರರಿಗೆ ಅದಾಗಲೇ ಅವಿಶ್ವಾಸ ಶುರುವಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!