ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಸೆದ ಸವಾಲನ್ನು ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಆದ್ರೆ ನಾನು ಕೊಟ್ಟಿರುವ ಹೇಳಿಕೆಯೇ ಬೇರೆ ಅವರು ಇಂದು ಹಾಕಿರುವ ಸವಾಲ್ ಬೇರೆ ಇದೆ. ನಾನು ಹೇಳಿದ ಹೇಳಿಕೆಗೂ ಇವತ್ತಿನ ರಾಜೀನಾಮೆ ಸವಾಲ್ಗೂ ಯಾವುದೇ ಸಂಬಂಧವಿಲ್ಲ. ರಾಜೀನಾಮೆ ಕೊಡುವಂತೆ ಯಾವತ್ತೂ ಹೇಳಿಲ್ಲ ಎಂದು ಯತ್ನಾಳ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಲೈನ್ನಲ್ಲಿ ರಾಜೀನಾಮೆ ಪತ್ರ ಕೊಡುತ್ತಾರೆ. ಕಂಡಿಷನ್ ಹಾಕಿ ರಾಜೀನಾಮೆ ಕೊಡುವುದು ಮುರ್ಖತನ. ಇಷ್ಟು ಉದ್ದ ರಾಜೀನಾಮೆ ಪತ್ರ ಎಂದಾದರೂ ಕೊಟ್ಟಿದಾರಾ? ಅವರಿಗೆ ಮಾನ ಮರ್ಯಾದೆ ಏನೂ ಇಲ್ಲ ಅದು ದಡ್ಡತನ. ಮರ್ಯಾದೆ ಇಲ್ಲದವರು ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ನಾನು ನನ್ನ ನಿರ್ಧಾರವನ್ನ ಶುಕ್ರವಾರ ತಿಳಿಸುತ್ತೇನೆ. ದಯವಿಟ್ಟು ನಾನು ಬಸವ ಜಯಂತಿ ದಿವಸ ಹೇಳಿದ್ದ ವಿಡಿಯೋ ತೋರಿಸಿ ಎಂದು ಹೇಳಿದರು.