ಹೊಸದಿಗಂತ ಡಿಜಿಟಲ್ ಡೆಸ್ಕ್:
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿವಣ್ಣ ಮಾತನಾಡಿ, ‘ದಳಪತಿ 69’ ಚಿತ್ರತಂಡವು ಒಂದೊಳ್ಳೆಯ ಪಾತ್ರ ಮಾಡಲು ನನ್ನನ್ನು ಅಪ್ರೋಚ್ ಮಾಡಿದ್ದು ನಿಜ. ಆ ಪಾತ್ರದ ಬಗ್ಗೆ ಕೇಳಿದಾಗ ಇಂಟರೆಸ್ಟಿಂಗ್ ಎಂದೆನಿಸಿತು. ಆದರೆ ಡೇಟ್ಸ್ ಅದೆಷ್ಟರ ಮಟ್ಟಿಗೆ ಹೊಂದಾಣಿಕೆ ಆಗಲಿದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಡೇಟ್ ನೋಡಿಕೊಂಡೆ ಎಲ್ಲವೂ ಪ್ಲ್ಯಾನ್ ಆಗುತ್ತದೆ ಅನಿಸುತ್ತದೆ.
ವಿಜಯ್ ಒಳ್ಳೆಯ ನಟ. ಇದು ಅವರ ಕೊನೆಯ ಸಿನಿಮಾ ಎಂದು ನಾವು ಹೇಳಲೇಬಾರದು. ಅವರು ಸಿನಿಮಾ ಮತ್ತು ರಾಜಕೀಯ ಎರಡನ್ನು ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಆದರೆ ವಿಜಯ್ ಸಿನಿಮಾ ಮಾಡೋದನ್ನು ಬಿಡಬಾರದು. ಅವರು ಚಿತ್ರಗಳನ್ನು ಮಾಡುತ್ತಲೇ ಇರಬೇಕು ಎಂದು ಶಿವಣ್ಣ ಮುಕ್ತವಾಗಿ ಹೇಳಿದ್ದಾರೆ. ಸದ್ಯ ವಿಜಯ್ ಸಿನಿಮಾದಲ್ಲಿ ಕನ್ನಡದ ನಟ ಕಾಣಿಸಿಕೊಳ್ಳುತ್ತಿರುವ ವಿಚಾರ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ವಿಜಯ್ ಕಡೆ ಸಿನಿಮಾ ಎಂದರೆ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುತ್ತಾರೆ. ಅವರು ಸಿನಿಮಾ ಹಾಗೂ ರಾಜಕೀಯವನ್ನು ಬ್ಯಾಲೆನ್ಸ್ ಮಾಡಬೇಕು ಎಂದಿದ್ದಾರೆ.