ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಿಂದ ಶಿವಣ್ಣ ಅವರ ಆರೋಗ್ಯ ಕುರಿತು ಬಿಗ್ ಅಪ್ಡೇಟ್ಸ್ ಹೊರಬಿದ್ದಿದೆ. ಫೈನಲಿ ಶಿವರಾಜ್ಕುಮಾರ್ ಕ್ಯಾನ್ಸರ್ ಫ್ರೀ ಆಗಿದ್ದಾರೆ.
ಸರ್ಜರಿ ಕುರಿತು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ದಂಪತಿ ಮಾತನಾಡಿದ್ದಾರೆ. ವಿಡಿಯೋದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, ಮೊದಲು ಎಲ್ಲ ಕನ್ನಡಿಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ನೀವೆಲ್ಲ ಮಾಡಿದ ಆಶೀರ್ವಾದದಿಂದ ಎಲ್ಲ ರಿಪೋರ್ಟ್ಗಳು ನೆಗೆಟಿವ್ ಬಂದಿವೆ. ಕೊನೆಯಲ್ಲಿ ಪೈಥೋಲಾಜಿ ರಿಪೋರ್ಟ್ ಬಗ್ಗೆ ಕಾಯುತ್ತಿದ್ದೆವು. ಅದು ಕೂಡ ನೆಗೆಟಿವ್ ಬಂದಿದ್ದು ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಫ್ರಿ ಆಗಿದ್ದಾರೆ ಎಂದು ಹೇಳಿದ್ದಾರೆ.
ಆಸ್ಪತ್ರೆಯವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದಕ್ಕೆಲ್ಲ ಕಾರಣ ದೊಡ್ಡವರ ಹಾಗೂ ನಿಮ್ಮೆಲ್ಲರ ಆಶೀರ್ವಾದವಾಗಿದೆ. ನಾನು ಇದನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಅಂತ ಗೀತಾ ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.