ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷವನ್ನು ಪ್ರಪಂಚದಾದ್ಯಂತ ಬಹಳ ಸಂತೋಷದಿಂದ ಸ್ವಾಗತಿಸಲಾಗಿದೆ. ಹಲವೆಡೆ ಕೇಕ್ ಕಟ್ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವುದಲ್ಲದೇ ಕೆಲವು ಕಡೆ ಎಣ್ಣೆ ಪಾರ್ಟಿಗಳ ಮೂಲಕ ಸಂಭ್ರಮ ಆಚರಿಸುತ್ತಾರೆ.
ಬೆಂಗಳೂರು ಸೇರಿದಂತೆ ಹಲವೆಡೆ ಯುವಕ-ಯುವತಿಯರು ಕುಡಿದ ಅಮಲಿನಲ್ಲಿ ತೂರಾಡಿದ್ದಾರೆ. ಆದರೆ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ.ಸಿಂಗುಪುರಂನಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ತಂತಿ ಮೇಲೆ ಮಲಗಿ ಗಮನ ಸೆಳೆದಿದ್ದಾನೆ.
ಮಾದಕ ವ್ಯಸನಿಯಾಗಿದ್ದ ಯಜ್ಜಲ ವೆಂಕಣ್ಣ ಎಂಬಾತ ತನ್ನ ತಾಯಿಗೆ ಮದ್ಯಪಾನಕ್ಕೆ ಹಣ ನೀಡುವಂತೆ ಒತ್ತಡ ಹೇರಿದ್ದು, ಬಳಿಕ ಕರೆಂಟ್ ಕಂಬ ಹತ್ತಿ ಕೇಬಲ್ ಮೇಲೆ ಮಲಗಿ ಹುಚ್ಚು ಸಾಹಸ ಮೆರೆದಿದ್ದಾನೆ.
ವೆಂಕಣ್ಣ ಕರೆಂಟ್ ಕಂಬ ಏರುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ವಿದ್ಯುತ್ ಡಿಪಿ ಸ್ವಿಚ್ ಆಫ್ ಮಾಡಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಆತನ ಜೀವ ಉಳಿದಿದೆ.