ಸಾಮಾಗ್ರಿಗಳು
ಪೈನಾಪಲ್ – 100 ಗ್ರಾಂ
ಚಿರೋಟಿ ರವೆ – 200 ಗ್ರಾಂ
ಸಕ್ಕರೆ – 100 ಗ್ರಾಂ
ಕುಂಕುಮ ಕೇಸರಿ
ಒಣದ್ರಾಕ್ಷಿ – 50 ಗ್ರಾಂ
ಗೋಡಂಬಿ – 50 ಗ್ರಾಂ
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – 2 ಚಮಚ
ಎಣ್ಣೆ – 3 ಚಮಚ
ನೀರು –100 ಮಿ.ಲೀ.
ಮಾಡುವ ವಿಧಾನ
ಪಾತ್ರೆಗೆ ಸಣ್ಣಗೆ ಹೆಚ್ಚಿದ ಪೈನಾಪಲ್, ಅಗತ್ಯಕ್ಕೆ ತಕ್ಕಷ್ಟು ನೀರು, ಸಕ್ಕರೆ, ಕುಂಕುಮ ಕೇಸರಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಬೇಯಲು ಬಿಡಿ. ಕಡಾಯಿಗೆ ಎಣ್ಣೆ, ತುಪ್ಪ ಹಾಕಿ ಕಾಯಿಸಿ. ಇದರಲ್ಲಿ ಗೋಡಂಬಿ, ಚಿರೋಟಿ ರವೆ ಹಾಕಿ ಹುರಿದುಕೊಳ್ಳಿ. ಇದಕ್ಕೆ ಬೇಯಿಸಿದ ಪೈನಾಪಲ್, ಸಕ್ಕರೆ ಮಿಶ್ರಣವನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ರವೆ ಬೇಯಲು ಬಿಡಿ. ಈಗ ಪೈನಾಪಲ್ ಕೇಸರಿಬಾತ್ ಸವಿಯಲು ರೆಡಿ.