ಗ್ಯಾನವಾಪಿಯಲ್ಲಿ ಸಿಕ್ಕಿದ್ದು ಶಿವಲಿಂಗವೇ..? ಇಂಡಿಯಾ ಟುಡೇ ಬಿತ್ತರಿಸಿದ ಚಿತ್ರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗ್ಯಾನವಾಪಿಯ ಮಸೀದಿಯಲ್ಲಿ ಮೂರುದಿನಗಳ ಸಮೀಕ್ಷೆ ಪೂರ್ಣಗೊಂಡ ನಂತರ ಹಿಂದೂ ಪರ ವಕೀಲರು ಮಸೀದಿ ಸಂಕೀರ್ಣದಲ್ಲಿರುವ ವಝುಖಾನಾ(ಕೊಳ/ಬಾವಿ ಇರುವ ಪ್ರದೇಶ) ದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಆದರೆ ಮಸೀದಿಯ ಸಮಿತಿ ಇದನ್ನು ತಳ್ಳಿ ಹಾಕಿದ್ದು ಅದು ಶಿಲಿಂಗವಲ್ಲ ಬದಲಾಗಿ ಕಾರಂಜಿ (ಚಿಲುಮೆ) ಎಂದು ಹೇಳಿರುವ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ಈ ಬಾವಿಯೊಳಗಿನ ವಿಶೇಷ ಚಿತ್ರವು ಪತ್ತೆಯಾಗಿದೆ ಎಂದೂ ಇಂಡಿಯಾ ಟುಡೇಯಲ್ಲಿ ಬಿತ್ತರಿಸಲಾಗಿದೆ. ಹಾಗೂ ವೀಡಿಯೊವೊಂದನ್ನು ಕೂಡ ಪ್ರಸಾರ ಮಾಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!