ಮತ್ತಷ್ಟು ಕ್ಷೀಣಿಸಿದ ಲಂಕಾ ಆರ್ಥಿಕ ಪರಿಸ್ಥಿತಿ, ಒಂದು ದಿನಕ್ಕಾಗುವಷ್ಟಿದೆ ಪೆಟ್ರೋಲ್‌ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀಲಂಕಾದಲ್ಲಿ ಪರಿಸ್ಥಿತಿ ಮತ್ತಷ್ಟು ದಯನೀಯ ಸ್ಥಿತಿ ತಲುಪುವ ಹಂತದಲ್ಲಿದೆ. ದೇಶದಲ್ಲಿ ಕೇವಲ ಒಂದು ದಿನಕ್ಕಾಗುವಷ್ಟು ಮಾತ್ರ ಪೆಟ್ರೋಲಿಯಂ ನಿಕ್ಷೇಪಗಳು ಇದೆ ಎಂದು ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಆತಂಕ ವ್ಯಕ್ತಪಡಿಸಿದ್ದಾರೆ. ಡೀಸೆಲ್ ಕೊರತೆಯೂ ಸಾಕಷ್ಟಿದೆ. ಪ್ರಸ್ತುತ ದೇಶವು ದುರಂತದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶವನ್ನು ಸುರಕ್ಷಿತವಾಗಿ ದಡಕ್ಕೆ ತರುವುದು ತನ್ನ ಆದ್ಯ ಕರ್ತವ್ಯ ಎಂದರು.

ಪ್ರಸ್ತುತ ಆರ್ಥಿಕ ಸವಾಲುಗಳನ್ನು ನಿವಾರಿಸಲು ಸರ್ವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್‌ಗೆ ಪರ್ಯಾಯವಾಗಿ ಹೊಸ ಬಜೆಟ್‌ ಮಂಡಿಸುತ್ತೇವೆ ಎಂದರು. 2019ರಲ್ಲಿ 7.5 ಶತಕೋಟಿ ಡಾಲರ್ ವಿದೇಶಿ ವಿನಿಮಯ ಸಂಗ್ರಹವಿದ್ದು, ಈಗ‌ ಖಜಾನೆಯಲ್ಲಿ  ಒಂದು ಮಿಲಿಯನ್ ಡಾಲರ್ ಕೂಡ ಇಲ್ಲದ ದುಸ್ಥಿತಿಯಲ್ಲಿ ಇದೆ ಎಂದರು.

ಅನಿಲವನ್ನು ಆಮದು ಮಾಡಿಕೊಳ್ಳಲು 5 ಮಿಲಿಯನ್ ಡಾಲರ್ ಅಗತ್ಯವಿದೆ. ಪ್ರಸ್ತುತ 3,200 ಶತಕೋಟಿ ಸಾಲಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಸಾಲದ ಮಿತಿಯನ್ನು 3,000 ಶತಕೋಟಿಯಿಂದ 4,000 ಶತಕೋಟಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತಿದೆ ಎಂದು ವಿಕ್ರಮ್ ಸಿಂಘೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!