Thursday, March 23, 2023

Latest Posts

ಲಾಡ್ಲೆ ಮಶಾಕ್ ದಗಾ೯ದಲ್ಲಿ ಶಿವರಾತ್ರಿ, ಉರುಸ್ ಆಚರಣೆ: ಪೂಜೆಗೆ ಬಂದ 15 ಜನ ಮುಸ್ಲಿಂ ಮುಖಂಡರು

ಹೊಸದಿಗಂತ ವರದಿ ಕಲಬುರಗಿ: 

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶಿವಲಿಂಗ ಪೂಜೆ ಹಿನ್ನೆಲೆಯಲ್ಲಿ ವಕ್ಫ್ ಟ್ರಿಬೂನಲ್ ನ್ಯಾಯಾಲಯದ ಆದೇಶದಂತೆ ಶನಿವಾರ ಬೆಳಿಗ್ಗೆ ದಗಾ೯ದೊಳಗೆ 15 ಜನ ಮುಸ್ಲಿಂ ಮುಖಂಡರು ಪ್ರವೇಶ ಮಾಡಿದರು.

ಶಿವರಾತ್ರಿ ದಿನದಂದೆ ಲಾಡ್ಲೆ ಮಶಾಕ್ ದಗಾ೯ದ ಉರುಸ್ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಬೆಳಗಿನ ಸಮಯವನ್ನು ಮುಸ್ಲಿಂ ಮುಖಂಡರ ಉರುಸ್ ಆಚರಣೆಗೆ ಮೀಸಲಿಟ್ಟ ಹಿನ್ನೆಲೆಯಲ್ಲಿ.15 ಜನ ಮುಸ್ಲಿಂ ಮುಖಂಡರು ಪೂಜೆಗೆ ದಗಾ೯ ಒಳಗೆ ತೆರಳಿದರು.

ವಕ್ಫ್ ಟ್ರಿಬೂನಲ್ ನ್ಯಾಯಾಲಯವು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ವರೆಗೆ ಮುಸ್ಲಿಂ ಸಮುದಾಯಕ್ಕೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು, ತದನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಿಂದೂಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!