ದೆಹಲಿ ಚುನಾವಣೆಗೆ ಸಜ್ಜಾಗುತ್ತಿರುವ ಆಮ್​ ಆದ್ಮಿಗೆ ಶಾಕ್: ಬಿಜೆಪಿ ಸೇರಿದ ಸುಖ್ಬೀರ್​ ದಲಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

2025ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಹಲವು ಘೋಷಣೆಗಳ ಮೂಲಕ ಈ ಆಮ್​ ಆದ್ಮಿ ಪಕ್ಷ ಎಲೆಕ್ಷನ್​​​ಗೆ ಸಜ್ಜಾಗುತ್ತಿದ್ದು, ಇದರ ನಡುವೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಮಾಜಿ ಶಾಸಕ ಮತ್ತು ಆಮ್​ ಆದ್ಮಿ ಪಕ್ಷದಲ್ಲಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದ ನಾಯಕ ಸುಖ್ಬೀರ್​ ದಲಾಲ್​ ಜೈನ್​ ಬಿಜೆಪಿ ಸೇರಿದ್ದಾರೆ.

ಕೇಂದ್ರ ಸಚಿವ ಹರ್ಷಾ ಮಲ್ಹೋತ್ರಾ, ಬಿಜೆಪಿ ರಾಜ್ಯ ಅಧ್ಯಕ್ಷ ವಿರೇಂದ್ರ ಸಚ್ದೇವ್​ ಮತ್ತು ಇತರ ರಾಜಕೀಯ ನಾಯಕರ ಸಮ್ಮುಖದಲ್ಲಿ ಅವರು ದೆಹಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ.

ಚುನಾವಣೆಯಲ್ಲಿ ಟಿಕೆಟ್​ ನಿರಾಕರಣೆಯಿಂದಾಗಿ ಎಎಪಿ ತೊರೆದಿಲ್ಲ. ಬದಲಾಗಿ ಬಿಜೆಪಿ ನೀತಿಯಲ್ಲಿ ವಿಶ್ವಾಸ ಹುಟ್ಟಿ ಈ ನಿರ್ಧಾರ ನಡೆಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್​ ಅವರ ಶೀಶಾ ಮಹಲ್​ ಕಟ್ಟಿದಾಗಿನಿಂದ ಎಎಪಿ ಭ್ರಷ್ಟಚಾರ ಎಲ್ಲ ಮೀತಿ ಮೀರಿದೆ. ಎಎಪಿ ಸರ್ಕಾರ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ್ಯಿಸಿ, ಭ್ರಷ್ಟಚಾರವನ್ನೇ ಆದ್ಯತೆಯಾಗಿ ಪರಿಗಣಿಸಿದೆ ಎಂದು ಇದೇ ವೇಳೆ ಅವರು ಹರಿಹಾಯ್ದಿದ್ದಾರೆ.

ಬಿಜೆಪಿ ಸೇರಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ ದೇಶದ ಪ್ರಗತಿಗೆ ಕಾರ್ಯ ನಿರ್ವಹಿಸಲು ಬದ್ದವಾಗಿರುವುದಾಗಿ ತಿಳಿಸಿದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!