August 25, 2026
Tuesday, August 25, 2026
spot_img

ಬೆಂಗಳೂರಿನ ವಾಹನ ಸವಾರರಿಗೆ ಶಾಕ್‌: ಮೂರು ತಿಂಗಳು ಕೆ.ಆರ್‌. ಮಾರ್ಕೆಟ್‌ ಫ್ಲೈ ಓವರ್‌ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಜನತೆ ಇನ್ನು ಮೂರು ತಿಂಗಳ ಕಾಲ ಕೆ.ಆರ್‌. ಮಾರ್ಕೆಟ್‌ನ ಮೇಲ್ಸೇತುವೆ ಮೇಲೆ ಓಡಾಡುವಂತಿಲ್ಲ!

ಹೌದು, ಸುಲ್ತಾನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆಯ ಚಾಮರಾಜಪೇಟೆ ತಿರುವಿನ ರಸ್ತೆ ಮುಂದಿನ ಮೂರು ತಿಂಗಳ ಕಾಲ ಬಂದ್ ಆಗಲಿದೆ. ಈ ಮೇಲ್ಸೇತುವೆ ಮೇಲೆ ನಿತ್ಯವೂ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಚಾಮರಾಜಪೇಟೆ ಹಾಗೂ ಬಸವನಗುಡಿಗೆ ಸಾವಿರಾರು ವಾಹನಗಳು ಹೋಗುತ್ತಿದ್ದವು. ಆದರೆ ಇದೀಗ ರಸ್ತೆ ಬಂದ್‌ ಆಗಿರುವ ಕಾರಣ ವಾಹನಗಳು ಮಧ್ಯದಲ್ಲೇ ಪರ್ಯಾಯ ಮಾರ್ಗದಲ್ಲಿ ತೆರಳುವಂತಾಗಿದೆ.

ಬೃಹತ್‌ ತೆರವು ಕಾರ್ಯ ಆರಂಭ

ಕೆ.ಆರ್. ಮಾರ್ಕೆಟ್‌ನಲ್ಲಿ ಬೃಹತ್ ತೆರವು ಕಾರ್ಯಾಚರಣೆಯೂ ಆರಂಭವಾಗಿದೆ. ಜಿಬಿಎ ಅಧಿಕಾರಿಗಳು ಪ್ಲೈಓವರ್ ಕೆಳಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಮೂರು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಯುತ್ತಿದ್ದು, ಸುಮಾರು 20ರಿಂದ 25 ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.

ಟ್ರಾಫಿಕ್‌ ಜಾಮ್‌ ಖಂಡಿತ

ವೈಟ್‌ ಟಾಪಿಂಗ್‌ ಕಾರ್ಯಾಚರಣೆ ಹಾಗೂ ಅನಧಿಕೃತ ಅಂಗಡಿಗಳು ತೆರವು ಕಾರ್ಯದಿಂದ ಈ ಭಾಗದಲ್ಲಿ ಇನ್ನೂ ಮೂರು ತಿಂಗಳು ಟ್ರಾಫಿಕ್‌ ಜಾಮ್‌ ಹೆಚ್ಚಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಸಂಚರಿಸುವವರು ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !