ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಎಐಎಡಿಎಂಕೆ ಅಂತ್ಯಗೊಳಿಸಿದೆ. ಎನ್‌ಡಿಎ ಕೂಟದಿಂದ ಹೊರನಡೆದಿದೆ.
ಲೋಕಸಭಾ ಚುನಾವಣೆಗೆ ಮೊದಲೇ ಎನ್‌ಡಿಎ ಕೂಟಕ್ಕೆ ಆಘಾತ ಎದುರಾಗಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಕನಸಿಗೆ ತೀವ್ರ ಹೊಡೆತ ಬಿದ್ದಿದೆ.
ಇಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ( ಎಐಎಡಿಎಂಕೆ) ತನ್ನ ಪಕ್ಷದ ಸಂಸದರು, ಶಾಸಕರು ಹಾಗೂ ನಾಯಕರ ಜೊತೆಗೆ ಜಿಲ್ಲಾ ಮಟ್ಟದ ಸಭೆ ನಡೆಸಿ ಮಹತ್ವದ ತೀರ್ಮಾನ ಘೋಷಿಸಿದೆ.
ಎಐಎಡಿಎಂಕೆ ನಾಯಕ ಕೆಪಿ ಮುನುಸ್ವಾಮಿ ಮೈತ್ರಿ ಮುರಿದುಕೊಂಡಿರುವ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಅಣ್ಣಾಮಲೈ ನಡವಳಿಕೆ, ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ನಾಯಕ ಅಣ್ಣಾ ದೊರೆಯನ್ನು ಖಂಡಿಸಿರುವುದು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.