ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ( BPL Ration Card ) ಮಾಡಲು ಮುಂದಾದವರಿಗೆ ಬಿಗ್ ಶಾಕ್ ನೀಡಿದ್ದು,ಬಿಪಿಎಲ್ ಕಾರ್ಡ್ ಹೊಂದಿ, ಆರ್ಥಿಕ ಸುಸ್ಥಿತಿಯನ್ನು ಇರುವವರ ಕಾರ್ಡ್ ರದ್ದು ಮಾಡೋದಕ್ಕೂ ಮುಂದಾಗಿ ಹೇಳಿದೆ.
ಆಹಾರ ಇಲಾಖೆ ಅದಕ್ಕಾಗಿ 6 ಮಾನದಂಡಗಳನ್ನು ಕೂಡ ( Food Department ) ಫಿಕ್ಸ್ ಮಾಡಿದ್ದು, ಆ ಮಾನದಂಡ ಮೀರಿದಂತ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಲ್ಲದೇ, ಅಂತಹ ಬಳಕೆದಾರರಿಗೆ ಭಾರೀ ದಂಡವನ್ನು ವಿಧಿಸೋ ಚಿಂತನೆ ನಡೆಸಿದೆ.
ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ( BPL Card ) ಪಡೆದವ್ರ ಮೇಲೆ ನಿಗಾ ವಹಿಸಿದೆ ಬಿಪಿಎಲ್ ಕಾರ್ಡ್ ದಾರರ ಆರ್ಥಿಕ ಸ್ಥಿತಿ ಬಗ್ಗೆ ಸರ್ವೇ ನಡೆಸೋದಕ್ಕೆ ಮುಂದಾಗಿದೆ. ಈ ಸರ್ವೆಯನ್ನು 6 ಮಾನದಂಡಗಳ ಮೇಲೆ ನಡೆಸಲಿದೆ ಎನ್ನಲಾಗುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗಲು ಸರ್ಕಾರಗಳು ಬಿಪಿಎಲ್ ಕಾರ್ಡ್ ಮೂಲಕ ಪಡಿತರ ವಿತರಣೆ ಮಾಡುತ್ತಿದೆ. ಆದರೆ ಕೆಲವರು ತಾವು ಅನುಕೂಲ ಸ್ಥಿತಿಯಲ್ಲಿದ್ದರೂ ಸಹ ಸುಳ್ಳು ಮಾಹಿತಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆಯುತ್ತಿದ್ದು, ಅಂತಹ ಕಾರ್ಡುಗಳನ್ನು ರದ್ದು ಮಾಡಲು ಈಗ ಕ್ರಮ ಕೈಗೊಳ್ಳಲಾಗುತ್ತಿದೆ.
ಜೀವನೋಪಾಯಕ್ಕೆ ಟ್ಯಾಕ್ಸಿಯಾಗಿ ವಾಹನ ಹೊಂದಿರುವವರನ್ನು ಹೊರತುಪಡಿಸಿ ಸ್ವಂತ ಬಳಕೆಗೆ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಪರಿಗಣಿಸಲಾಗಿದ್ದು, ಇದೀಗ ಇಂತಹ ವಾಹನಗಳ ಮಾಹಿತಿ ನೀಡುವಂತೆ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ವಲಯದ ಸಂಸ್ಥೆಗಳು ಅಥವಾ ಸರ್ಕಾರದ ನೆರವಿನ ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂತ ಅಧಿಕ ಭೂಮಿ ಹೊಂದಿರುವ ಕುಟುಂಬಗಳು ಹಾಗೂ 1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಪರಿಗಣಿಸಲಾಗಿದ್ದು, ಇದನ್ನು ಪರಿಶೀಲಿಸಿ ಅಂಥವರ ಕಾರ್ಡ್ ರದ್ದುಗೊಳಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಒಂದು ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ಕಾರ್ಡ್ ಪಡೆದಿದ್ದರೆ ಅಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ದಂಡ ಕೂಡ ವಿಧಿಸಲಿದೆ.
ಬಿಪಿಎಲ್ ಕಾರ್ಡ್ ರದ್ದು, ದಂಡಕ್ಕೆ 6 ಹೊಸ ಮಾನದಂಡಗಳು ಏನು?
ಬಿಪಿಎಲ್ ಕಾರ್ಡ್ ಹೊಂದಿರೋರು ವೈಟ್ ಬೋರ್ಟ್ ಕಾರು ಹೊಂದಿರುವಂತಿಲ್ಲ.
ವಾರ್ಷಿಕ 1.2 ಲಕ್ಷ ಆದಾಯವನ್ನು ಮೀರುವಂತಿಲ್ಲ.
3 ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ರೇ ಬಿಪಿಎಲ್ ಕಾರ್ಡ್ ರದ್ದು
ನಗರ ಪ್ರದೇಶದಲ್ಲಿ 1000 ಸ್ಕ್ವಯರ್ ಪೀಟ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಹೊಂದಿರುವಂತಿಲ್ಲ.
ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರ ಆಗಿರುವಂತಿಲ್ಲ.
ಬಿಪಿಎಲ್ ಕಾರ್ಡ್ ಹೊಂದಿರೋರು ಆದಾಯ ತೆರಿಗೆ, ಐಟಿ ರಿಟರ್ನ್, ವಾಣಿಜ್ಯ ತೆರಿಗೆ ಪಾವತಿದಾರರು ಆಗಿರುವಂತಿಲ್ಲ.