July 17, 2026
Friday, July 17, 2026
spot_img

ಉದ್ಯಮಿ ಅನಿಲ್ ಅಂಬಾನಿಗೆ ಶಾಕ್: 3800 ಕೋಟಿ ಮೌಲ್ಯದ Abode ಮನೆ ಸೀಜ್‌ ಮಾಡಿದ ED

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ‘ಅಬೋಡ್’ ನಿವಾಸದ ಮೇಲೆ ಇಡಿ ತಾತ್ಕಾಲಿಕ ಮುಟ್ಟುಗೋಲು ಕ್ರಮ ಕೈಗೊಂಡಿದೆ.

ಈ ಕುರಿತು ಇಡಿ ಮಾಹಿತಿ ನೀಡಿದ್ದು, ಇದು 2002 ರ ಪಿಎಂಎಲ್‌ಎ ಅಡಿಯಲ್ಲಿ 3,716.83 ಕೋಟಿ ಮೌಲ್ಯದ್ದಾಗಿದೆ. ಅನಿಲ್ ಅಂಬಾನಿ ಮತ್ತು ಅವರ ಗ್ರೂಪ್‌ ಕಂಪನಿಗಳ ವಿರುದ್ಧ ಇದುವರೆಗೆ 15,000 ಕೋಟಿ ರೂ.ಗಳಿಗಿಂತ ಹೆಚ್ಚ ಮುಟ್ಟುಗೋಲು ಹಾಕಲಾಗಿದೆ.

ಬಾಂಬೆ ಹೈಕೋರ್ಟ್ ಸೋಮವಾರ ಅನಿಲ್‌ ಅಂಬಾನಿ ಕಂಪನಿಗಳಿಗೆ ದೊಡ್ಡ ಹೊಡೆತ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಏಕ ನ್ಯಾಯಾಧೀಶ ಪೀಠದ ಮಧ್ಯಂತರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗಳನ್ನು ವಂಚನೆ ಎಂದು ವರ್ಗೀಕರಿಸುವ ಕ್ರಮವನ್ನು ಏಕ ನ್ಯಾಯಾಧೀಶ ಪೀಠ ತಡೆಹಿಡಿಯುವ ಆದೇಶ ನೀಡಿತ್ತು.

ಇಡಿ ವಶಪಡಿಸಿಕೊಂಡ ಅನಿಲ್ ಅಂಬಾನಿ ಅವರ ಐಷಾರಾಮಿ ಮನೆ ಅಬೋಡ್ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿದೆ. ಈ ಕಟ್ಟಡವನ್ನು ‘ಅಬೋಡ್’ ಎಂದು ಪ್ರಖ್ಯಾತವಾಗಿ ಕರೆಯಲಾಗುತ್ತಿತ್ತು. ಇದು ಒಟ್ಟು 17 ಮಹಡಿಗಳನ್ನು ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !