ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ಚಾಂಪಿಯನ್ ಇಂಗ್ಲೆಂಡ್ ಗೆ ತ್ರೀವ ಮುಖಭಂಗವಾಗಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 8 ವಿಕೆಟ್ಗಳಿಂದ ಗೆಲುವು ಸಾಧಿಸಿದೆ.
ಮಾಜಿ ನಾಯಕ ಹಾಗೂ ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ತಂಡಕ್ಕೆ ಮರಳಿದ ಬಳಿಕ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಶ್ರೀಲಂಕಾ ತಂಡ ಮಿಂಚಿನ ನಿರ್ವಹಣೆ ತೋರುವ ಮೂಲಕ 157 ರನ್ಗಳ ಸವಾಲನ್ನು ಕೇವಲ 25.4 ಓವರ್ಗಳಲ್ಲಿ ಬೆನ್ನಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಶ್ರೀಲಂಕಾದ ನಿಖರ ಬೌಲಿಂಗ್ ದಾಳಿಗೆ ಬೆಂಡಾಗಿ 33.2 ಓವರ್ಗಳಲ್ಲಿ 156 ರನ್ಗೆ ಆಲೌಟ್ ಆಯಿತು. ಇನ್ನೊಂದೆಡೆ ಶ್ರೀಲಂಕಾ ತಂಡ 25.4 ಓವರ್ಗಳಲ್ಲಿ 2 ವಿಕೆಟ್ಗೆ 160 ರನ್ ಬಾರಿಸಿ ಗೆಲುವು ಕಂಡಿತು.