April 18, 2026
Saturday, April 18, 2026
spot_img

ಬಿಹಾರ ಚುನಾವಣೆ ಅಖಾಡಕ್ಕೆ ಇಳಿದ ‘ಇಂಡಿಯಾ’ ಬಣಕ್ಕೆ ಶಾಕ್: ಸ್ವತಂತ್ರ ಸ್ಪರ್ಧೆ ಘೋಷಿಸಿದ JMM!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಇತ್ತ ‘ಇಂಡಿಯಾ’ ಬಣದಿಂದ ಟಿಕೆಟ್ ಹಂಚಿಕೆ ಇನ್ನೂ ನಡೆದಿಲ್ಲ. ಇದರ ನಡುವೆ ಸೀಟು ಹಂಚಿಕೆಯಿಂದ ಅಸಮಾಧಾನಗೊಂಡಿರುವ ‘ಮಹಾಘಟಬಂಧನ್’ ನ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಚಕೈ, ಧಮ್‌ದಾಹಾ, ಕಟೋರಿಯಾ (ST) ಮಣಿಹಾರಿ (ST) ಜಮುಯಿ ಮತ್ತು ಪಿರ್‌ಪೈಂಟಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !