ಮನೀಷ್ ಸಿಸೋಡಿಯಾ,ಸತ್ಯೇಂದರ್ ಜೈನ್ ಗೆ ಶಾಕ್: ಎಎಪಿ ನಾಯಕರ ವಿರುದ್ಧ ತನಿಖೆಗೆ ರಾಷ್ಟ್ರಪತಿ ಅನುಮತಿ

 ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಶಾಲಾ ಕೊಠಡಿಗಳು ಅಥವಾ ಕಟ್ಟಡಗಳ ನಿರ್ಮಾಣದಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಔಪಚಾರಿಕ ತನಿಖೆ ಆರಂಭಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಅನುಮತಿ ನೀಡಿದ್ದಾರೆ.

1,300 ಕೋಟಿ ರೂ.ಗಳ ತರಗತಿ ಹಗರಣದಲ್ಲಿ ಇಬ್ಬರು ಎಎಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.

ಡಿಸೆಂಬರ್ 2018ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದು, ಅಕ್ರಮ ಆಸ್ತಿ 1.47 ಕೋಟಿ ರೂ.ಗಳಷ್ಟಿದೆ. ಇದು 2015-17ರಲ್ಲಿ ಸತ್ಯೇಂದ್ರ ಜೈನ್ ಅವರ ಆದಾಯದ ಮೂಲಗಳಿಗಿಂತ ಸುಮಾರು ಶೇ. 217 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

2015-16ರ ಅವಧಿಯಲ್ಲಿ ಸತ್ಯೇಂದರ್ ಜೈನ್ ಸಾರ್ವಜನಿಕ ಸೇವಕರಾಗಿದ್ದರು ಮತ್ತು 4 ಕಂಪನಿಗಳು ಅವರ ಒಡೆತನ ಮತ್ತು ನಿಯಂತ್ರಣದಲ್ಲಿದ್ದವು. ಶೆಲ್ (ನಕಲಿ) ಕಂಪನಿಗಳಿಂದ 4.81 ಕೋಟಿ ರೂ.ಗಳಷ್ಟು ಹಣ ಸ್ವೀಕರಿಸಿ ಕೋಲ್ಕತ್ತಾ ಮೂಲದ ಪ್ರವೇಶ ನಿರ್ವಾಹಕರಿಗೆ ಹವಾಲಾ ಮಾರ್ಗದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ಇಡಿ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿತ್ತು.

ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗೆ ಗೃಹ ಸಚಿವಾಲಯ ಕೂಡ ಅನುಮೋದನೆ ನೀಡಿದೆ. ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್‌ಗೆ ಮಾಹಿತಿ ನೀಡಿದ್ದು, ಇಬ್ಬರು ಮಾಜಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!