ವಾಹನ ಸವಾರರಿಗೆ ಶಾಕ್: ಕೇರಳದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್-ಡೀಸೆಲ್ ಬೆಲೆ 2 ರೂ. ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ (Kerala) ಪ್ರತಿ ಲೀಟರ್‌ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ 2 ರೂ. ಏರಿಕೆಯಾಗಲಿದೆ.

ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್‌ (Kerala Budget 2023) ಮಂಡಿಸಿದ್ದಾರೆ. ಈ ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮೇಲೆ ಸಾಮಾಜಿಕ ಭದ್ರತಾ ಸೆಸ್ ವಿಧಿಸಲಾಗುವುದು ಎಂದು ಘೋಷಿಸಿದರು.

ಕೇರಳದಲ್ಲಿ ಶುಕ್ರವಾರ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 107.44 ರೂ. ಇದ್ದರೆ ಡೀಸೆಲ್‌ ಬೆಲೆ 96.26 ರೂ. ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!