ವಾಹನ ಸವಾರರಿಗೆ ಶಾಕ್: ಸಗಟು ಡೀಸೆಲ್ ಬೆಲೆ ಲೀಟರ್‌ʼಗೆ 25 ರೂ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಗಟು ಗ್ರಾಹಕರಿಗೆ ಡೀಸೆಲ್ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಲೀಟರ್‌ಗೆ 25 ರೂ. ಹೆಚ್ಚಳವಾಗಿದೆ
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.ಆದರೆ ಪೆಟ್ರೋಲ್ ಪಂಪ್‌ಗಳ ಮೂಲಕ ಮಾರಾಟವಾಗುವ ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈ ತಿಂಗಳು ಪೆಟ್ರೋಲ್ ಪಂಪ್‌ಗಳ ಮಾರಾಟದಲ್ಲಿ ಶೇಕಡಾ 20 ರಷ್ಟು ಜಿಗಿತ ಕಂಡುಬಂದಿದೆ. ಬಸ್ ಫ್ಲೀಟ್ ನಿರ್ವಾಹಕರು ಮತ್ತು ಮಾಲ್‌ಗಳಂತಹ ಸಗಟು ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಂದ ಇಂಧನವನ್ನು ಖರೀದಿಸಿದ್ದಾರೆ. ಸಾಮಾನ್ಯವಾಗಿ ಅವರು ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಂದ ಇಂಧನವನ್ನು ಸಂಗ್ರಹಿಸುತ್ತಾರೆ. ಇದರಿಂದ ಇಂಧನವನ್ನು ಚಿಲ್ಲರೆಯಾಗಿ ಮಾರಾಟ ಮಾಡುವ ಕಂಪನಿಗಳ ನಷ್ಟ ಹೆಚ್ಚಿದೆ. ಅದರಲ್ಲೂ ನೈರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಕಂಪನಿಗಳು ಹೆಚ್ಚು ಪರಿಣಾಮ ಬೀರಿವೆ. ಮಾರಾಟವನ್ನು ಹೆಚ್ಚಿಸಿದರೂಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈಗ ಪಂಪ್‌ಗಳು ಕಾರ್ಯನಿರ್ವಹಿಸಲು ಆರ್ಥಿಕವಾಗಿ ಲಾಭದಾಯಕವಾಗುವುದಿಲ್ಲ ಎಂಬುವುದು ಉಲ್ಲೇಖನೀಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!