September 30, 2026
Wednesday, September 30, 2026
spot_img

ಪಿಜಿ ಮಾಲೀಕರಿಗೆ ಶಾಕ್‌, ಬೆಂಗಳೂರಿನ 500ಕ್ಕೂ ಹೆಚ್ಚು ಪಿಜಿಗಳಿಗೆ ನೊಟೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಒಂದೊಂದು ಏರಿಯಾದಲ್ಲೇ ನೂರಾರು ಪಿಜಿಗಳಿವೆ. ಎಲ್ಲ ಪಿಜಿಗಳು ಗೈಡ್‌ಲೈನ್ಸ್‌ ಫಾಲೋ ಮಾಡೋದಿಲ್ಲ. ಏರಿಯಾದಲ್ಲಿದ್ದ ಮನೆಯೊಂದು ಏಕಾಏಕಿ ಪಿಜಿಯಾಗಿ ಬದಲಾಗಿಬಿಡುತ್ತದೆ. ಸದ್ಯ ಗ್ರೇಟರ್‌ ಬೆಂಗಳೂರು ಅಥಾರಿಟಿ ಪಿಜಿಗಳಿಗೆ ಶಾಕ್‌ ನೀಡಿದೆ.

ನಗರದಲ್ಲಿರುವ 500ಕ್ಕೂ ಹೆಚ್ಚು ಪಿಜಿಗಳಿಗೆ ನೊಟೀಸ್‌ ನೀಡಲಾಗಿದೆ. ಅನೇಕ ಪಿಜಿಗಳು ಮೂಲಭೂತ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಸುರಕ್ಷಿತ ಪಿಜಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಕಳೆದ ತಿಂಗಳು ಶಾಂತಿನಗರ, ಸಿ.ವಿ.ರಾಮನ್‌ನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಪಾಸಣೆ ನಡೆಸಿದ ಆರೋಗ್ಯಾಧಿಕಾರಿಗಳು 574 ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಡುಗೆ ಕೋಣೆ ಶುಚಿತ್ವ, ಶುದ್ಧ ಕುಡಿಯುವ ನೀರು, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದ 8 ಪಿಜಿಗಳಿಗೆ ಬೀಗ ಹಾಕಲಾಗಿದ್ದು, ಇತರೆ ನಿಯಮ ಉಲ್ಲಂಘನೆಗಳಿಗೆ ಒಟ್ಟೂ 3.09 ಲಕ್ಷ ರೂ. ದಂಡ ವಿಧಿಸಲಾಗಿದೆ.

Must Read