October 9, 2026
Friday, October 9, 2026
spot_img

ಕ್ವಾಲಿಫೈಯರ್‌ಗೂ ಮುನ್ನ RCBಗೆ ಶಾಕ್‌: ಐಪಿಎಲ್‌ಗೆ ಗುಡ್‌ಬೈ ಹೇಳಿದ ಬೆಥೆಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ 2026ರ ನಿರ್ಣಾಯಕ ಹಂತದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮಹತ್ವದ ಹಿನ್ನಡೆಯಾಗಿದೆ.

ಕ್ವಾಲಿಫೈಯರ್‌-1 ಪಂದ್ಯಕ್ಕೂ ಮುನ್ನವೇ ತಂಡದ ಯುವ ಸ್ಫೋಟಕ ಬ್ಯಾಟರ್‌ ಜಾಕೋಬ್‌ ಬೆಥೆಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತು ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದೆ.

ಗಾಯದಿಂದ ಇಂಗ್ಲೆಂಡ್‌ಗೆ ಮರಳಿದ ಬೆಥೆಲ್‌

ಮೇ 17ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಜಾಕೋಬ್‌ ಬೆಥೆಲ್‌ ಅವರ ಉಂಗುರದ ಬೆರಳಿಗೆ ಗಾಯವಾಗಿತ್ತು. ಇದೇ ಕಾರಣಕ್ಕೆ ಅವರು ಹೈದರಾಬಾದ್‌ ವಿರುದ್ಧದ ಪಂದ್ಯಕ್ಕೂ ಗೈರಾಗಿದ್ದರು. ಮುಂಬರುವ ಅಂತಾರಾಷ್ಟ್ರೀಯ ಸರಣಿಗಳಿಗೆ ಸಿದ್ಧತೆ ನಡೆಸುತ್ತಿರುವ ಇಂಗ್ಲೆಂಡ್‌ ತಂಡ ಸೇರಿಕೊಳ್ಳುವ ಮುನ್ನ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಬೆಥೆಲ್‌ ತವರಿಗೆ ಮರಳಿದ್ದಾರೆ ಎಂದು ಆರ್‌ಸಿಬಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:

ಐಪಿಎಲ್‌ನಲ್ಲಿ ಸಾಧನೆ ಹೇಗಿತ್ತು?

ಈ ಆವೃತ್ತಿಯ ಐಪಿಎಲ್‌ನಲ್ಲಿ ಬೆಥೆಲ್‌ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದಿದ್ದರೂ, ಕೆಲ ಪ್ರಮುಖ ಪಂದ್ಯಗಳಲ್ಲಿ ತನ್ನ ಫೀಲ್ಡಿಂಗ್‌ನಿಂದ ಗಮನ ಸೆಳೆದಿದ್ದರು. 7 ಇನ್ನಿಂಗ್ಸ್‌ಗಳಲ್ಲಿ ಅವರು 96 ರನ್‌ ಗಳಿಸಿದ್ದು, ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕೇವಲ 17 ರನ್‌ ಗಳಿಸಿದ್ದರು. ಆದರೆ ಅದ್ಭುತ ಕ್ಯಾಚ್‌ ಹಾಗೂ ಫೀಲ್ಡಿಂಗ್‌ ಮೂಲಕ ತಂಡದ ಗೆಲುವಿನಲ್ಲಿ ಪಾತ್ರವಹಿಸಿದ್ದರು.

ಮೇ 26ಕ್ಕೆ ಕ್ವಾಲಿಫೈಯರ್‌-1

ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಆರ್‌ಸಿಬಿ, ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಬೆಂಗಳೂರು ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಸೋತರೂ ಫೈನಲ್‌ ತಲುಪಲು ಮತ್ತೊಂದು ಅವಕಾಶ ದೊರೆಯಲಿದೆ.

Must Read