ಮದ್ಯ ಪ್ರಿಯರಿಗೆ ರಾಜ್ಯ ಸರಕಾರದಿಂದ ಶಾಕ್: ಮತ್ತೆ ಬಿಯರ್ ದರ ಏರಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ಸರಕಾರ ಶಾಕ್ ನೀಡಿದ್ದು, ಇಂದಿನಿಂದಲೇ (ಫೆ.1) ಮದ್ಯದ ದರ ಏರಿಕೆಯಾಗಿದೆ.

ಅಬಕಾರಿ (Excise Department) ಸುಂಕವನ್ನು 18.5% ರಿಂದ 19.5%ಗೆ ಹೆಚ್ಚಿಸಿರುವ ಹಿನ್ನೆಲೆ, ಬಿಯರ್ ಬಾಟಲಿಗೆ 5 ರಿಂದ 12 ರೂ. ವರೆಗೂ ಬೆಲೆ ಏರಿಕೆಯಾಗಿದೆ. ಇದರಿಂದ ಕಳೆದ 6 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 40 ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಚುನಾವಣೆ ನಂತರ ಕಾಂಗ್ರೆಸ್ (Congress) ನೇನೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಮೇಲೆ ಶೇ.20 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಬಳಿಕ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಪ್ರತಿ ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ದರ ಏರಿಕೆ ಮಾಡಿದ್ದವು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!