ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ಮಂಡಿಸಿರೋ ₹19,927 ಕೋಟಿ ಮೊತ್ತದ ಬಜೆಟ್ ಕುರಿತು ಪರ-ವಿರೋಧ ಚರ್ಚೆ ಶುರುವಾಗಿದೆ.
ಈ ಬಾರಿಯ ಆಯವ್ಯಯದಲ್ಲಿ ಜನಾನುರಾಗಿ ಯೋಜನೆಗಳೇನು ಇಲ್ಲವಾದರೂ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಪಾಲಿಕೆ ಒತ್ತು ಕೊಟ್ಟಿದೆ. ಆದರೆ ಇದೆಲ್ಲದರ ನಡುವೆ ಸದ್ದಿಲ್ಲದೇ ಬೆಂಗಳೂರು ಜನರಿಗೆ ತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಗಾರ್ಬೇಜ್ ಸೆಸ್ ಸಂಗ್ರಹ ಘೋಷಣೆ ಮಾಡಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕಸಕ್ಕೆ ಸೆಸ್ ವಸೂಲಿ ಆಗಲಿದ್ದು, ಕೋಟಿ ಕೋಟಿ ಆದಾಯ ಗಳಿಸುವ ಲೆಕ್ಕಾಚಾರ ಇಟ್ಟುಕೊಂಡಿದೆ. ಬೆಳೆಯುತ್ತಿರುವ ಬೆಂಗಳೂರನ್ನು ನಿಭಾಯಿಸಲು ಈ ರೀತಿಯ ಕ್ರಮಗಳು ಅಗತ್ಯ ಎಂದು ಬಿಬಿಎಂಪಿ ತನ್ನ ನಡೆ ಸಮರ್ಥಿಸಿಕೊಂಡಿದೆ.
ಈ ಬಾರಿ ಆಸ್ತಿ ತೆರಿಗೆ ಹೆಚ್ಚಳವನ್ನು ಪಾಲಿಕೆ ಸಂಪೂರ್ಣವಾಗಿ ಕೈಬಿಟ್ಟಿದೆ. ಆದ್ರೆ ಇದರ ಜೊತೆಗೆ ಗಾರ್ಬೇಜ್ ಸೆಸ್ ವಸೂಲಿ ಜಾರಿ ಮಾಡಿದೆ. ಆಸ್ತಿ ತೆರಿಗೆಯ ಜೊತೆಗೇ ಗಾರ್ಬೆಜ್ ಸೆಸ್ ಅನ್ನೂ ಸಂಗ್ರಹ ಮಾಡಲಿದ್ದು, ಸದ್ಯದ ತೆರಿಗೆಯ ಮೊತ್ತಕ್ಕಿಂತ ಶೇ.2ರಿಂದ 3ರಷ್ಟು ಹೆಚ್ಚುವರಿ ಶುಲ್ಕವನ್ನು ಜನಸಾಮಾನ್ಯರು ಏಪ್ರಿಲ್ 1ರಿಂದ ವಾರ್ಷಿಕವಾಗಿ ಪಾವತಿ ಮಾಡಬೇಕಿದೆ.